|
| ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಧ್ವನಿಸುರುಳಿ ಬಿಡುಗಡೆ |
| ಬೆಂಗಳೂರು, ಶುಕ್ರವಾರ, 18 ಜುಲೈ 2008 ( 19:05 IST ) | |
ಚಿಕ್ಕಮಗಳೂರು ಚಿಕ್ಕಮಲ್ಲಿಗೆ ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗಿದೆ. ಗ್ರೀನ್ ಹೌಸ್‌ನಲ್ಲಿ ನಡೆದ ಸಮಾರಂಭದಲ್ಲಿ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು.ಚಿತ್ರದಲ್ಲಿ 9 ಮಂದಿ ಹೊಸ ಗಾಯಕ-ಗಾಯಕಿಯರು ಹಾಡಿರುವುದು ಹೈಲೈಟ್. ಈಗೀಗ ಬಾಲಿವುಡ್ ಗಾಯಕ ಬೆನ್ನುಬೀಳೋದು ಹೆಚ್ಚುತ್ತಿದ್ದರೂ ಸ್ಥಳೀಯ ಪ್ರತಿಭೆಗಳ ಕಂಠದಲ್ಲಿ ಕಲ್ಯಾಣ್ ಉತ್ತಮವಾಗಿ ಹಾಡಿಸಿದ್ದಾರೆ ಅಂತಾರೆ ಚನ್ನಂಗಪ್ಪ.
ಪಶ್ಚಿಮಘಟ್ಟದ ಕಾಸನಮಕ್ಕಿಯಲ್ಲಿ ಸ್ವಿಡ್ಜರ್ಲೆಂಡಿನ ತಾಣಗಳನ್ನೂ ನಾಚಿಸುವಂತಹ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ತುಂಬಾ ಶ್ರಮವಹಿಸಿ ಚಿತ್ರೀಕರಣ ಮಾಡಿದ್ದೇವೆ. ಜನ ಮೆಚ್ಚುತ್ತಾರೆಂಬ ಭರವಸೆ ನನಗಿದೆ ಎನ್ನುತ್ತಾರೆ ಅವರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ, ನಾನು ಬಾಲ್ಯ ಕಳೆದದ್ದು ಚಿಕ್ಕಮಗಳೂರಿನಲ್ಲಿ, ಬಿಡಿಎನಂತಹ ಆದಾಯ ತರುವ ಇಲಾಖೆ ಬಿಟ್ಟು ಚಿತ್ರರಂಗದತ್ತ ಆಸಕ್ತಿ ವಹಿಸಿದ್ದಕ್ಕೆ ಚನ್ನಂಗಪ್ಪನವರನ್ನು ಅಭಿನಂದಿಸುತ್ತೇನೆ. ಕಲ್ಯಾಣ್ ಸಂಗೀತ ಸೃಜನಾತ್ಮಕವಾಗಿದೆ. ಸ್ಥಳೀಯರಿಗೆ ಅವಕಾಶ ನೀಡಿರುವುದಕ್ಕೆ ನಾನು ಅಭಿನಂದಿಸುತ್ತೇನೆ ಎಂದರು.
ಸಾ.ರಾ. ಗೋವಿಂದು ಅವರು ಮಾತನಾಡಿ, ಚಿತ್ರರಂಗಕ್ಕೆ ನನ್ನಿಂದ ಏನು ಒಳ್ಳೆಯದು ಮಾಡಬಹುದೋ ಅದನ್ನೇಲ್ಲ ಮಾಡುತ್ತೇನೆ. ಬರಿ ಮಾತನಾಡುವ ಬದಲು, ಕೆಲಸ ಮಾಡಿಸಿ ತೋರಿಸಬೇಕೆಂದು ನನ್ನ ನಿಲುವು ಎಂದರು.
ಮನಸ್ಸೂ ಮಲ್ಲಿಗೆ ಇದ್ದ ಹಾಗೇನೆ. ಮಲ್ಲಿಗೆ ಮನಸ್ಸಿನ ಸಂಕೇತ. ಸಿನಿಮಾ ಯಶಸ್ಸಾಗುತ್ತೇವೆಂದು ನಂಬಿದ್ದೇವೆ. ಒಳ್ಳೆಯ ಕೆಲಸ ಮಾಡಿದ್ದೇವೆಂದು ಆತ್ಮಸಂತೃಪ್ತಿ ಇದೆ. ಮಿಕ್ಕಿದ್ದೆಲ್ಲ ಕಾಲವೇ ನಿರ್ಧರಿಸಬೇಕು ಅಂದ್ರು ಸಂಗೀತ ನಿರ್ದೇಶಕ ಕೆ. ಕಲ್ಯಾಣ್.
'ರಿಸ್ಕೀ ಜಾಗದಲ್ಲೆಲ್ಲಾ ಕ್ಯಾಮರಾ ಇಟ್ಟು ಚಿತ್ರೀಕರಿಸಿದ್ದೇವೆ' ಅಂದ್ರು ಕ್ಯಾಮರಾ ಮ್ಯಾನ್ ಕೃಷ್ಣ.
ಗಣೇಶ್ ಹಾದಿಯಲ್ಲೇ ಸಾಗುವ ಆಸೆಯಿಂದ ಬಂದ ಟಿವಿ ಆಯಂಕರ್ ಶ್ರವಂತ್ ಚಿತ್ರದ ನಾಯಕ. ಪೂಜಾಗಾಂಧಿ ತಂಗಿ ರಾಧಿಕಾ ಗಾಂಧಿ ಇವರಿಗೆ ನಾಯಕಿ. ನಿರ್ಮಾಪಕ ಅಶ್ವತ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು. ಪೂಜಾಗಾಂಧಿಯೂ ಬಂದಿದ್ದು ಕಾರ್ಯಕ್ರಮದ ವಿಶೇಷ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|