|
| ಅಕ್ಕ ತಂಗಿ ಜೋಡಿ- ಮಾಡಿತು ಮೋಡಿ |
| ಬೆಂಗಳೂರು, ಬುಧವಾರ, 16 ಜುಲೈ 2008 ( 16:34 IST ) | |
ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು ಹಿಂಬಾಲಿಸಿದ ತಂಗಿ ರಾಧಿಕಾ ಗಾಂಧಿ ಈಗ ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದಾರೆ.
ರಾಧಿಕಾ ಗಾಂಧಿಯ ಮೊದಲ ಚಿತ್ರ 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಹಾಗೂ ಪೂಜಾಗಾಂಧಿ ನಟಿಸುತ್ತಿರುವ 'ಮಹಿರ್ಷಿ' ಚಿತ್ರದ ಕಾರ್ಯಕ್ರಮ ಒಂದೇ ದಿನ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದರು. ತಂಗಿ ಚಿತ್ರಕ್ಕೆ ಅಕ್ಕ, ಅಕ್ಕನ ಚಿತ್ರಕ್ಕೆ ತಂಗಿ ತೆರಳಿ ಶುಭಾಶಯ ತಿಳಿಸಿದರು.
ಪೂಜಾಳಿಗೆ ಕನ್ನಡದಲ್ಲಿ ಮಾತನಾಡಿದರೆ, ತಂಗಿಗೆ ಸ್ವಲ್ಪ ಕಷ್ಟ. ಈಗಷ್ಟೇ ಕನ್ನಡ ಕಲಿಯುತ್ತಿರುವುದನ್ನು ಅವರ ಮಾತುಗಳಿಗೆ ತಿಳಿಯಬಹುದಿತ್ತು. ಅಂದಹಾಗೆ ಪೂಜಾಗಾಂಧಿಗೆ ಇನ್ನೊಬ್ಬ ತಂಗಿ ಇದ್ದಾಳೆ. ಆಕೆಯೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರೆ ಗಾಂಧಿನಗರಕ್ಕೆ ನಿಜವಾದ ಅರ್ಥ ಸಿಗುತ್ತದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಜನರೊಂದಿಗೆ ಬೆರೆಯುವುದು ಮತ್ತು ನಿಮ್ಮ ಹವ್ಯಾಸದಲ್ಲಿ ಆನಂದಪಡುವುದು ಈಗ ಮಾಡಬೇಕಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದುನಿಯಾ ಖ್ಯಾತಿಯ ಬಳಿಕ ನಾಯಕಿ ರಶ್ಮಿ ಸಿಕ್ಕಾಪಟ್ಟೆ ಸಂಭಾವನೆ ಕೇಳುತ್ತಿದ್ದಾರೆ ಎಂದು ನಿಮಾರ್ಪಕ ಸೂರಪ್ಪ ಬಾಬು ಇತ್ತೀಚೆಗೆ ಹೇಳಿಕೆ ನೀಡಿರುವ ಬಗ್ಗೆ ರಶ್ಮಿ ಮುಖ ಊದಿಸಿಕೊಂಡಿದ್ದಾರೆ. |
| |
|
|
|
|
|
|
|