|
| ಇದು ವಿಜಯ್ ಜಮಾನಾ |
| ಬೆಂಗಳೂರು, 15 ಜುಲೈ 2008 ( 16:52 IST ) | |
ವಿಜಯ್ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. 'ಜಂಗ್ಲಿ' ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ತಯಾರಿ ಮಾಡಿಕೊಂಡಿರುವ ವಿಜಯ್‌ಗೆ ಮೊನ್ನೆ 'ದುನಿಯಾ' ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ ಬಾಚಿಕೊಂಡಿದ್ದು ಆಯಿತು.
ಈಗ ಇನ್ನೊಂದು ಚಿತ್ರದ ಸಿದ್ಧತೆಯಲ್ಲಿದ್ದಾರೆ. ಗಜ ಚಿತ್ರದ ನಿರ್ದೇಶಕ ಮಾದೇಶ್ ಅವರ ಮುಂದಿನ ಚಿತ್ರ 'ಚಿರತೆ'ಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಸಂಭಾಷಣೆಗಾರ ಹಾಗೂ ನಿರ್ದೇಶಕ ಎಂ.ಎಸ್. ರಮೇಶ್ ನಿರ್ದೇಶನದ ಚಿತ್ರದಲ್ಲಿ ವಿಜಯ್ ನಟಿಸುತ್ತಿದ್ದಾರೆ.
ಮುಖ್ಯಮಂತ್ರಿ ಐ ಲವ್ ಯೂ, ಸ್ಲಂಬಾಲ, ಪುಟ್ಟ ಹೀಗೆ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ವಿಜಯ್‌ಗೆ ತಮಿಳು ನಿರ್ದೇಶಕರೊಬ್ಬರು ಕಾಲ್ಶೀಟ್ ಕೇಳಲು ಬಂದಿದ್ದರಂತೆ. ಆದರೆ ವಿಜಯ್ ಅದಕ್ಕೆ ಒಪ್ಪಲಿಲ್ಲ. ಕಾರಣ ಇಷ್ಟೇ. ಇತ್ತೀಚೆಗೆ ನಡೆದ ಫಿಲಂ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ತೆಲುಗು ತಮಿಳಿಗೆ ಬಿದ್ದಂತಹ ಚಪ್ಪಾಳೆ ಕನ್ನಡ ಸಿನಿಮಾಕ್ಕೆ ಬೀಳಲಿಲ್ಲವಲ್ಲ ಎಂದು ಬೇಸರ ಪಟ್ಟುಕೊಂಡಿದ್ದರು. ಕನ್ನಡ ಬೇಡವಾದರೆ ಚಿತ್ರಗಳ ನಾಯಕರು ಯಾಕೆ ಎಂದು ವಿಜಯ್ ಮುನಿಸಿಕೊಂಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ. ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ಅಧಿಕಾರಿ ಮತ್ತು ಹಿರಿಯ ಸಹೋದ್ಯೋಗಿಗಳು ನೆರವು ನೀಡುತ್ತಾರೆ. ಪ್ರೋತ್ಸಾಹಕ ಸುದ್ದಿಗಳನ್ನು ಪಡೆಯಲಿದ್ದೀರಿ. ನಿಮ್ಮ ಅದೃಷ್ಟದ ದೆಸೆಯಿಂದ ನಿಮ್ಮ ಅಭಿಲಾಶೆಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ತಮ್ಮ 47 ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಸಂಭ್ರಮವನ್ನು ಹಂಚಿಕೊಂಡರು. |
| |
|
|
|
|
|
|
|