|
| ಹೊಡೆದಾಟದ ಚಿತ್ರ ವರ |
| ಬೆಂಗಳೂರು, ಸೋಮವಾರ, 14 ಜುಲೈ 2008 ( 13:52 IST ) | |
ಪರೀಕ್ಷೆ ಬರೆಯಲೆಂದು ಬೆಂಗಳೂರಿಗೆ ಬರುವ ನಾಯಕ-ನಾಯಕಿ ವಿಚಿತ್ರ ಸನ್ನಿವೇಶವೊಂದರಲ್ಲಿ ಭೂಗತ ಜಗತ್ತಿಗೆ ಪ್ರವೇಶಿಸುತ್ತಾರೆ. ಈ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೋರಾಟವೇ 'ವರ'. ಇದು ಚಿತ್ರದ ಶೀರ್ಷಿಕೆಯೂ ಹೌದು, ನಾಯಕನ ಹೆಸರು ಹೌದು.
ಆಕ್ಷನ್ ಹೆಚ್ಚಿನ ಆದ್ಯತೆ ಇರುವ ಈ ಚಿತ್ರವನ್ನು ಡಾ. ಇಬ್ರಾಹಿಂ ಪಾಷಾ ಮತ್ತು ರಫತ್ ಮಲಿಕ್ ನಿರ್ಮಿಸುತ್ತಿದ್ದು, ಚಂದ್ರಶೇಖರ್ ನಿರ್ದೇಶಿಸುತ್ತಿದ್ದಾರೆ. ಅದ್ದೂರಿ ಕ್ಲೈಮಾಕ್ಸ್ ಚಿತ್ರ ಹೈಲೈಟ್ಸ್. ಇದಕ್ಕಾಗಿ ತಮ್ಮ ಉದ್ಯಮದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ್ದ ಸ್ನೇಹಿತರನ್ನು ನಿರ್ದೇಶಕರು ಚಿತ್ರಕ್ಕೆ ಕರೆತಂದಿದ್ದಾರೆ. ಆಶ್ಲೀ ಮತ್ತು ಅನಂತ್ ಜೋಡಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.
ಮಿಂಚು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಾಯಕ ಸಿದ್ದಾಂತ್‌ಗೆ ಇದು ಎರಡನೇ ಚಿತ್ರ. ಮೊದಲ ಚಿತ್ರ ಬಿಡುಗಡೆ ಸಿದ್ದವಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ಸಿದ್ದಾಂತ್ ಆಕ್ಷನ್ ನೋಡಿದ ನಿರ್ಮಾಪಕರು ತಕ್ಷಣವೇ ಹೊಸ ಆಕ್ಷನ್ ಚಿತ್ರಕ್ಕೆ ಕರೆತಂದರು. ಜಾಹಿರಾತುಗಳಲ್ಲಿ ಅಭಿನಯಿಸಿರುವ ಕನ್ನಡದ ಹುಡುಗಿ ನಿಧಿ ಈ ಚಿತ್ರದ ನಾಯಕಿ. ಪೋಷಕ ನಟ ಅನಂತ್ ನಾಗ್ ಕಾಣಿಸಿಕೊಳ್ಳಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಪ್ರೀತಿಸಿದವರ ಮೇಲೆ ಪ್ರೋತ್ಸಾಹ ಮತ್ತು ಗಮನ ನೀಡಬೇಕಾದ ಅವಶ್ಯಕತೆ ಇದೆ. ಸರಿಯಾದ ವ್ಯಕ್ತಿಗಳು ನಿಮ್ಮ ಹಾದಿಗೆ ಬರುವುದರಿಂದ ಅಪೂರ್ಣ ಯೋಜನೆಯೊಂದರಲ್ಲಿ ಪ್ರಗತಿ ಸಾಧಿಸುತ್ತೀರಿ. ಅಧಿಕಾರಿ ಮತ್ತು ಹಿರಿಯ ಸಹೋದ್ಯೋಗಿಗಳು ನೆರವು ನೀಡುತ್ತಾರೆ. ಪ್ರೋತ್ಸಾಹಕ ಸುದ್ದಿಗಳನ್ನು ಪಡೆಯಲಿದ್ದೀರಿ. ನಿಮ್ಮ ಅದೃಷ್ಟದ ದೆಸೆಯಿಂದ ನಿಮ್ಮ ಅಭಿಲಾಶೆಗಳಿಗೆ ಸೂಕ್ತ ಪ್ರತಿಕ್ರಿಯೆ ದೊರೆಯುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು ತಮ್ಮ 47 ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬ ಸಂಭ್ರಮವನ್ನು ಹಂಚಿಕೊಂಡರು. |
| |
|
|
|
|
|
|
|