ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಸೀರಿಯಸ್ ಆಗಲಿರುವ ಶುಭಾ ಪೂಂಜಾ
ಬೆಂಗಳೂರು, ಸೋಮವಾರ, 7 ಜುಲೈ 2008   ( 16:07 IST )
'ಚಂಡ'ನ ರಾಣಿಯಾಗಿ ಮೆರೆದ ಕರಾವಳಿಯ ಬೆಡಗಿ ಶುಭಾ ಪೂಂಜಾಗೆ ನಂತರ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಅವಕಾಶ ಸಿಕ್ಕಿತ್ತು. ಚೆಲ್ಲು ಚೆಲ್ಲು ನಗುವಿನ ಈ ಬೆಡಗಿ ಎಲ್ಲವನ್ನು ಮುಕ್ತವಾಗಿ, ನಿರ್ಭಯವಾಗಿ ಹೇಳುವ ಜಾಯಮಾನದವಳು.

ಪ್ರಸ್ತುತ 'ಸ್ಲಂಬಾಲಾ' ಚಿತ್ರದಲ್ಲಿ ನಟಿಸಿರುವ ಈ ಬೆಡಗಿ ಇಲ್ಲಿ ತುಂಬಾ ಸೀರಿಯಸ್ ಆಗಿ ನಟಿಸಿದ್ದಾರಂತೆ. ಹಿಂದೆ ಕೇವಲ ನಟನೆ ಮಾಡುತ್ತಿದ್ದೆ. ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ಈ ಚಿತ್ರದಲ್ಲಿ ಗಂಭೀರವಾಗಿ ಅಭಿನಯಿಸಿದ್ದೇನೆ ಎನ್ನುವ ಶುಭಾಳಿಗೆ ದುನಿಯಾ ವಿಜಯ್ ಸುತ್ತ ಕೆಲವು ಗಾಸಿಪ್‌ಗಳು ಎದ್ದಿದ್ದವು. ಆದರೆ ಅದನ್ನೆಲ್ಲಾ ತಳ್ಳಿಹಾಕಿರುವ ಶುಭ, ವಿಜಯ್ ನನ್ನ ಸ್ನೇಹಿತನಷ್ಟೆ ಎಂದು ತಿಳಿಸಿದ್ದಾಳೆ.

ಈಕೆಗೆ ಈಗ 'ಹಂಗಾಮ' ಎಂಬ ಹೊಸ ಚಿತ್ರದಲ್ಲೂ ಅವಕಾಶ ಸಿಕ್ಕಿದೆ. ಸ್ಲಂಬಾಲಾ ಚಿತ್ರೀಕರಣ ಮುಗಿಯುವವರೆಗೆ ಬೇರೆ ಚಿತ್ರಗಳಲ್ಲಿ ನಟಿಸಬಾರೆಂದು ಚಿತ್ರದ ನಿರ್ದೇಶಕಿ ಸುಮಾನಾ ಕಿತ್ತೂರು ಹೇಳಿದರಂತೆ. ಅದಕ್ಕೆ ಈ ನಟಿ ಒಪ್ಪಿಕೊಂಡಿದ್ದಳು.

ಸ್ಲಂಬಾಲಾ ಚಿತ್ರದಲ್ಲಿ ಈಕೆಗೆ ಕ್ಲಬ್ ಡ್ಯಾನ್ಸರ್ ಪಾತ್ರ. ಸದಾ ನಗುತ್ತಲೇ ಎಲ್ಲರನ್ನೂ ಮೋಡಿ ಮಾಡುವ ಬೆಡಗಿ ಉತ್ತಮ ಅವಕಾಶಗಳ ನಿರೀಕ್ಷೆಯಲ್ಲಿದ್ದಾಳೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚಿತ್ರಮಂಡಳಿ ಸಮಸ್ಯೆ ಸಿಕ್ಕು ಬಿಡಿಸುವರೇ ಜಯಮಾಲಾ?
ಗೊಂದಲಕ್ಕೀಡು ಮಾಡಿದ ಹಾಡು
ಈಗೇನಿದ್ದರೂ ಗಣೇಶ್ ಜಮಾನಾ
ಪೈರಸಿ ಖದೀಮರ ವಿರುದ್ಧ ಕಿಡಿಕಾರಿದ ಜಯಮಾಲ
ಹೊಡೆದಾಟಕ್ಕಿಳಿದ ನಮ್ಮೆಜಮಾನ್ರು
ಚೀನಾದಲ್ಲಿ ಹಾಡಿದ ಬುದ್ದಿವಂತ!
ಗ್ರಹ ಗತಿ
ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಮಲದಳಕ್ಕೆ ಸಿಂಧ್ಯಾ ಸೇರ್ಪಡೆ?
ಇತ್ತೀಚೆಗಷ್ಟೇ ಬಿಎಸ್ಪಿಯಿಂದ ಉಚ್ಛಾಟನೆಗೊಂಡಿರುವ ಹಿರಿಯ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಅವರ ಮುಂದಿನ ರಾಜಕೀಯ..
ಚುನಾವಣೆಗೆ ಸಜ್ಜುಗೊಳ್ಳಲು ವೆಂಕಯ್ಯ ನಾಯ್ಡು ಕರೆ
ತನಿಖೆಯಾದರೆ ಗೌಡರ ಕುಟುಂಬ ಜೈಲಿಗೆ: ರೆಡ್ಡಿ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು?
ಮುಂದೆ ಓದಿ|ಮತ್ತಷ್ಟು...