|
| ಗೊಂದಲಕ್ಕೀಡು ಮಾಡಿದ ಹಾಡು |
| ಬೆಂಗಳೂರು, ಶನಿವಾರ, 5 ಜುಲೈ 2008 ( 13:41 IST ) | |
ಚಿತ್ರರಂಗದಲ್ಲಿ ಒಂದಲ್ಲ ಒಂದು ಗೊಂದಲ ಸೃಷ್ಟಿಯಾಗುತ್ತಲೇ ಇರುತ್ತದೆ. ಆದರೆ ಈ ಬಾರಿ ಒಂದು ಗೊಂದಲ ಸೃಷ್ಟಿಯಾಗಿದೆ. ಅದು ಚಿತ್ರರಂಗದ ಮಂದಿಯದ್ದಲ್ಲ. ಬದಲಾಗಿ ಪ್ರೇಕ್ಷಕರ ನಡುವೆ. 'ನಿನ್ನ ಪೂಜೆಗೆ ಬಂದೆ ಮಾದೇಶ್ವರ' ಹಾಡು ಈಗ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಆದರೆ ಇದು ಯಾವ ಚಿತ್ರದ ಹಾಡು?
ಈ ಗೊಂದಲ ಅನೇಕರಿಗಿದೆ. ಆದರೆ ಇದು 'ಸೈಕೋ' ಚಿತ್ರದ ಹಾಡು. ಇಲ್ಲಿ ಮಾದೇಶ್ವರ ಎಂಬ ಹೆಸರು ಬಂದಿದ್ದರಿಂದ ಅನೇಕರು ಇದು ಶಿವರಾಜ್ ಕುಮಾರ್ ಅಭಿನಯದ ಮಾದೇಶ್ವರ ಚಿತ್ರದ ಹಾಡು ಎಂದು ಭಾವಿಸಿದ್ದಾರೆ. ಸಂಗೀತ ನಿರ್ದೇಶಕ ರಘು ದೀಕ್ಷಿತ್ ಶ್ರಮ ಪಟ್ಟು ಈ ರೀತಿಯ ಒಂದು ಉತ್ತಮ ಸಂಗೀತ ನೀಡಿದ್ದಾರೆ.
ಹಾಡು ಈಗಾಗಲೇ ಎಲ್ಲಡೆ ಜನಪ್ರಿಯವಾಗಿದೆ. ಇದರಿಂದ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ಚಿತ್ರತಂಡ ಹೊಂದಿದೆ. ಆದರೆ ಹಾಡಿನ ಗೊಂದಲವನ್ನು ನಿವಾರಿಸಲು ಚಿತ್ರತಂಡ ಒಂದು ಉಪಾಯಕ್ಕೆ ಮುಂದಾಗಿದೆ. ಅದೇನೆಂದರೆ ಸೈಕೋ ಚಿತ್ರದ ವಾಲ್ ಫೋಸ್ಟರ್‌ಗಳಲ್ಲಿ ನಿನ್ನ ಪೂಜೆಗೆ ಬಂದೆ ಮಾದೇಶ್ವರ ಎಂದು ಬರೆಯಲು ಮುಂದಾಗಿದೆ.
ಈವರೆಗೆ ಚಿತ್ರದ ನಾಯಕ -ನಾಯಕಿ ಯಾರೆಂಬುದನ್ನು ನಿರ್ದೇಶಕರು ಬಹಿರಂಗ ಪಡಿಸಿಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮ್ಮ ಸಾಮರ್ಥ್ಯದ ಬಗ್ಗೆ ಇಂದು ನೀವು ಹೆಚ್ಚು ಭರವಸೆಯಿಂದಿರುತ್ತೀರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮತ್ತು ನಿಮಗೆ ಮಾನಸಿಕ ನಿರಾಳತೆ ನೀಡುತ್ತವೆ. ಮಿತ್ರರ ಸಹಕಾರವೂ ದೊರೆಯಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪೈರಸಿ ಮಾಡುವವರನ್ನು ವಿರುದ್ಧ ಗೂಂಡಾ ಕಾಯ್ದೆ ಅಡಿ ಬಂಧಿಸಬೇಕೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ |
| |
|
|
|
|
|
|
|