|
| ಚೀನಾದಲ್ಲಿ ಹಾಡಿದ ಬುದ್ದಿವಂತ! |
| ಬೆಂಗಳೂರು, ಶುಕ್ರವಾರ, 4 ಜುಲೈ 2008 ( 13:57 IST ) | |
ಬುದ್ದಿವಂತದ ಹಾಡೊಂದನ್ನು ಚೀನಾದಲ್ಲಿ ಚಿತ್ರೀಕರಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಹಾಡೊಂದನ್ನು ಚೀನಾದಲ್ಲಿ ಚಿತ್ರೀಕರಿಸಲಾಗಿದೆ. ಉಪೇಂದ್ರ ಅವರೇ ಬರೆದು ಹಾಡಿರುವ 'ಚಿತ್ರಾನ್ನ ಚಿತ್ರಾನ್ನ..' ಹಾಡನ್ನು ಹೈದಾರಾಬಾದಿನ ಗೋಲ್ಕಂಡ ಕೋಟೆಯಲ್ಲಿ ಚಿತ್ರೀಕರಿಸಲಾಗಿದೆಯಂತೆ.
ಒಂದು ರೀಮಿಕ್ ಹಾಡನ್ನು ಕಾಶ್ಮೀರದಲ್ಲಿ ಹಾಗೂ ಉಳಿದ ಎರಡು ಹಾಡುಗಳನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ತಮಿಳಿನ ವಿಜಯ್ ಆಂಟನಿ ಸಂಗೀತ ನೀಡಿದ್ದು, ಚಿತ್ರದಲ್ಲಿ ಒಂದು ತೆಲುಗು ಹಾಡೂ ಕೂಡಾ ಇದೆಯಂತೆ. 'ಉಪೇಂದ್ರ' ಚಿತ್ರದಲ್ಲಿ ನೋಡಿದ ಉಪೇಂದ್ರರನ್ನು ಈ ಚಿತ್ರದ ಮೂಲಕ ಮತ್ತೊಮ್ಮೆ ನೋಡಬಹುದು.
ಚಿತ್ರದ ನಿರ್ಮಾಪಕರು ಈ ಚಿತ್ರದ ಬಜೆಟ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. 'ಈ ಚಿತ್ರದಲ್ಲಿ ಉಪೇಂದ್ರರೇ ಡಿಫರೆಂಟ್ ಅವರನ್ನು ಯಾರೂ ತೋರಿಸದ ರೀತಿಯಲ್ಲಿ ನಾವು ತೋರಿಸಿದ್ದೇವೆ. ಉಪೇಂದ್ರ ಅವರೇ ಈ ಸಿನಿಮಾವನ್ನು ಪ್ರಮೋಟ್ ಮಾಡುತ್ತಾರೆ' ಎಂದರು ನಿರ್ಮಾಪಕ ಮೋಹನ್. ಚಿತ್ರಕ್ಕೆ ಉಪೇಂದ್ರ, ಕವಿರಾಜ್ ಸಾಹಿತ್ಯ ನೀಡಿದ್ದಾರೆ. ಜಂಗ್ಲಿ ಮ್ಯೂಸಿಕ್ ಆಡಿಯೋ ಹಕ್ಕು ಖರೀದಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|