|
| ಪ್ರತಿಭಟನೆಗಿಳಿದ ಗಾಯಕರು |
| ಬೆಂಗಳೂರು, ಬುಧವಾರ, 2 ಜುಲೈ 2008 ( 14:59 IST ) | |
ಕೊನೆಗೂ ಕನ್ನಡದ ಗಾಯಕರು ಬೀದಿಗಿಳಿದಿದ್ದಾರೆ. ತಮಗೂ ಚೆನ್ನಾಗಿ ಹಾಡಕ್ಕೂ ಬರುತ್ತೆ. ನಮಗೆ ಅವಕಾಶ ಕೊಡಿ. ಬಾಲಿವುಡ್ ಗಾಯಕರಿಗಿಂತ ಚೆನ್ನಾಗಿ ಹಾಡಿ ತೋರಿಸುತ್ತೇವೆ ಎಂದು ಪಟ್ಟು ಹಿಡಿದು ಬುಧವಾರ ರವೀಂದ್ರ ಕಲಾಕ್ಷೇತ್ರದ ಎದುರು ಧರಣಿ ನಡೆಸುತ್ತಿದ್ದಾರೆ.
ಆನಂದ್ ಆಡಿಯೋ ಮಾಲೀಕರು, ಇತ್ತೀಚೆಗೆ ಬಾಲಿವುಡ್ ಗಾಯಕರು ತುಂಬಾ ಚೆನ್ನಾಗಿ ಹಾಡುತ್ತಾರೆ. ಕೆಲವು ಹಾಡುಗಳಿಗೆ ಅವರ ಧ್ವನಿ ಸೂಟ್ ಆಗುತ್ತದೆ. ಅದಕ್ಕಾಗಿ ಅವರನ್ನೇ ಕರೆಸುತ್ತೇವೆ ಎಂದು ಹೇಳಿ ಬೆಂಕಿಗೆ ತುಪ್ಪ ಸುರಿದಿದ್ದರು. ಇದನ್ನು ಪ್ರತಿಭಟಿಸಿ ರಾಜೇಶ್ ಕೃಷ್ಣನ್ ಹಾಗೂ ಹೇಮಂತ್ ನೇತೃತ್ವದ ತಂಡ ಪ್ರತಿಭಟನೆ ನಡೆಸುತ್ತಿದ್ದೆ.
ಈಗ ಯಾವುದೇ ಚಿತ್ರದಲ್ಲಾಗಲಿ ಒಂದು ಹಾಡನ್ನಾದರೂ ಬಾಲಿವುಡ್‌ನ ಸೋನುನಿಗಮ್, ಉದಿತ್ ನಾರಾಯಣ್ ಅಥವಾ ಕುನಾಲ್ ಗಾಂಜಾವಾಲಾರಿಂದ ಹಾಡಿಸುವುದು ರೂಢಿ. ಸೋನು ಕನ್ನಡದವರ ಕಾಟ ತಪ್ಪಲಿ ಎಂದು ಒಂದು ಹಾಡಿಗೆ ಎರಡು ಲಕ್ಷ ರೂ.ಗಿಂತಲೂ ಹೆಚ್ಚು ಸಂಭಾವನೆ ಕೇಳುತ್ತಾರೆ. ಆದರೂ ನಮ್ಮ ಕನ್ನಡವರು ಅವರನ್ನೇ ಪಟ್ಟು ಹಿಡಿದು ಹಾಡಿಸುತ್ತಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ ಮತ್ತು ಹಿರಿಯರು ಕೂಡ ಸೂಕ್ತ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟತೆಯನ್ನೇ ಮೆರೆದುಕೊಂಡು ಬಂದ ಜನ್ಮ ಚಿತ್ರ ಈಗ ಮತ್ತೆ ಕೆಲವು ವಿಶಿಷ್ಟತೆಗಳನ್ನು ಮಾಡಿದೆ. ಆದರೆ ಇದು ಮಾತ್ರ ಜನರಿಗಾಗಿಯಲ್ಲ. ನಿರ್ದೇಶಕರಿಗಾಗಿ. ಈಗ ಚಿತ್ರದ ನಾಯಕಿಯನ್ನು ಬದಲಿಸಲಾಗಿದೆ. ಚಿತ್ರದ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಿಸಿ ಎಲ್ಲರ ಗಮನವನ್ನು ನಿರ್ದೇಶಕರು ಸೆಳೆದಿದ್ದರು. |
| |
|
|
|
|
|
|
|