ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಕಬಡ್ಡಿ ರಂಪಾಟ!
ಬೆಂಗಳೂರು, ಸೋಮವಾರ, 30 ಜೂನ್ 2008   ( 13:56 IST )
ಕಬಡ್ಡಿ ಈಗ ವಿವಾದದಲ್ಲಿದೆ. ಅದು ಹೊರಗಿನವರ ನಡುವೆ ವಿವಾದವಲ್ಲ. ಸ್ವತ: ಚಿತ್ರದ ನಿರ್ದೇಶಕ ನರೇಂದ್ರ ಬಾಬು ಹಾಗೂ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಿಶೋರ್ ನಡುವೆ. ಇತ್ತೀಚೆಗೆ ಕಬ್ಬಡ್ಡಿ ಚಿತ್ರತಂಡ ಕರೆದ ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಬಾಬು ನೇರವಾಗಿ ಕಿಶೋರ್‌ರನ್ನು ಟೀಕಿಸಿದರು.

ವಿಷ್ಯ ಏನಂದ್ರೆ, ನರೇಂದ್ರ ಬಾಬು ಒಂದು ಸ್ವಂತ ಕಥೆಯ ಚಿತ್ರವನ್ನು ಮಾಡಬೇಕೆಂದು ಒಂದು ವರ್ಷ ಕುಳಿತು ಕಥೆ ರೆಡಿ ಮಾಡಿ, ಅದನ್ನು ನಿರ್ಮಾಪಕ, ನಟ ಕಿಶೋರ್‌ಗೆ ಹೇಳಿದರಂತೆ. ಆದರೆ ಕಿಶೋರ್ ಅದೇ ಕಥೆಯನ್ನು ತೆಲುಗಿನ ನಿರ್ದೇಶಕರಿಗೆ ಹೇಳಿ ಅಲ್ಲಿಯೂ ವೆನಿಲ್ಲಾ ಕಬ್ಬಡ್ಡಿಕುಳ ಎಂಬ ಚಿತ್ರ ಬರುತ್ತಿದೆಯಂತೆ. ಆ ಚಿತ್ರದಲ್ಲೂ ಕಿಶೋರ್ ಕಬಡ್ಡಿ ಕೋಚ್ ಪಾತ್ರ ಮಾಡುತ್ತಿದ್ದಾರೆ. ಆ ಚಿತ್ರ ನಮ್ಮ ಚಿತ್ರಕ್ಕಿಂತ ಮುಂಚೆ ಬಿಡುಗಡೆಯಾದರೆ ನಮ್ಮ ಚಿತ್ರ ಗತೀಯೇನು? ತೆರಿಗೆ, ಸಬ್ಸಿಡಿ ಎಲ್ಲವು ಗೋವಿಂದಾ.. ಎಂಬುದು ನರೇಂದ್ರ ಬಾಬು ವಾದ.

ಆದರೆ ಈ ಬಗ್ಗೆ ಕಿಶೋರ್ ಹೇಳುವುದೆಂದರೆ, 'ಆ ಕಥೆಗೂ ಇದಕ್ಕೂ ಸಂಬಂಧವಿಲ್ಲ. ನರೇಂದ್ರ ಬಾಬು ಮೊದಲಿನಿಂದಲೂ ಹೀಗೆ ವಿವಾದವನ್ನು ಮಾಡುತ್ತಲೇ ಬಂದಿದ್ದಾರೆ. ಚಿತ್ರಕ್ಕೆ ನಾನು 30 ಲಕ್ಷ ರೂ. ಹಾಕಿದ್ದೇನೆ. ಬೇಗನೇ ಮುಗಿಸಿ, ಬಿಡುಗಡೆ ಮಾಡಿ ಎಂದು ಹೇಳುತ್ತಲೇ ಬಂದಿದ್ದೇನೆ. ಆದರೆ ಈಗ ಒಂದೂವರೆ ಕೋಟಿ ರೂ. ಬಜೆಟಿನ ಚಿತ್ರ ಎರಡು ಕೋಟಿಗೆ ಬಂದಿದೆ. ಇನ್ನೂ 50 ಲಕ್ಷ ಬೇಕಂತೆ' ಎನ್ನುತ್ತಾರೆ. ಯಾರದ್ದೂ ಸತ್ಯವೋ ಯಾರದ್ದೂ ಸುಳ್ಳೊ ಅವರಿಬ್ಬರಿಗೇ ಗೊತ್ತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಸಿಟಿಜನ್ ನಿರೀಕ್ಷೆಯಲ್ಲಿ ಸಾಯಿಕುಮಾರ್
ನಿಷೇಧಾಜ್ಞೆಗೆ ಡಿಟಿಎಸ್‌ ಟಚ್
ನಿರ್ದೇಶನದತ್ತ ದೊಡ್ಡಣ್ಣನ ಚಿತ್ತ
'ಪರಿಚಯ' ಚಿತ್ರಕರಣ ಆರಂಭ
ವೀರಮದಕರಿಯಾಗಲಿರುವ ಸುದೀಪ್
ಬೆಳ್ಳಿ ಪರದೆ ಮೇಲೆ ವೀರ ರಾಣಿ ಅಬ್ಬಕ್ಕ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
file
 
ಚುನಾವಣೆಗೆ ಸಿದ್ಧರಾಗುವಂತೆ ಸೋನಿಯ ಕರೆ
ಯುಪಿಎ ಸರ್ಕಾರ ಅಥವಾ ಭಾರತ-ಅಮೆರಿಕ ಪರಮಾಣು ಒಪ್ಪಂದ ಎರಡರಲ್ಲಿ ಒಂದನ್ನು ಮಾತ್ರ ...
ಭಾರತ-ಪಾಕ್ ಐದನೇ ಸುತ್ತಿನ ಮಾತುಕತೆ
ಜಮ್ಮುವಿನಿಂದ ಅಮರನಾಥ್ ಯಾತ್ರೆ ಆರಂಭ
ಮನರಂಜನೆ
ಚಿತ್ರ ಸುದ್ದಿ - 'ನಿಷೇಧಾಜ್ಞೆ' ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಇಲ್ಲಿ ನಮ್ಮ ರಾಜಕೀಯ ವ್ಯವಸ್ಥೆ ಅಲ್ಲಿ ನಡೆಯುವ ಭ್ರಷ್ಟಚಾರ ಹಾಗೂ ರಾಜಕಾರಣಿಗಳು ರಾಜಕೀಯವನ್ನು ಬಂಡವಾಳ ಹೂಡುವ ಮಾರುಕಟ್ಟೆಯನ್ನಾಗಿ ಮಾಡಿಕೊಂಡಿರುವ ಬಗೆಯನ್ನು 'ನಿಷೇಧಾಜ್ಞೆ' ಚಿತ್ರದಲ್ಲಿ ತೋರಿಸಲಾಗಿದೆ ಎಂದು
ಮುಂದೆ ಓದಿ|ಮತ್ತಷ್ಟು...