|
| ಗುರುಕಿರಣ್ ಕಿರಿಕ್!.. |
| ಬೆಂಗಳೂರು, ಶುಕ್ರವಾರ, 9 ಮೇ 2008 ( 12:55 IST ) | |
ಕರಾವಳಿ ತಡಿಯಿಂದ ಬಂದ ಸ್ಪುರದ್ರೂಪಿ ಸಂಗೀತ ನಿರ್ದೇಶಕ ಗುರುಕಿರಣ್ ಚಿತ್ರರಂಗದಲ್ಲಿ ಒಮ್ಮೆಲೇ ಹೆಸರು ಮಾಡಿದರು. ಕ್ರೇಜಿ ಯುವಕರಿಗೆ ಬೇಕಾದಂತಹ ಸಂಗೀತವನ್ನು ನೀಡಿದ ಗುರುಕಿರಣ್‌ಗೆ ನಂತರದ ದಿನಗಳಲ್ಲಿ ಬೇಡಿಕೆ ಹೆಚ್ಚಿತು.
ಆದರೆ ಕ್ರಮೇಣ ಯಾಕೋ ಗುರು ಬಗ್ಗೆ ಗಾಂಧಿನಗರದಲ್ಲಿ ಏನೋ ಕೆಲವು ಅಂತೆ-ಕಂತೆಗಳು ಕೇಳಿಬರಲಾರಂಭಿಸಿದವು. ಗುರು ಹಿಂದಿಯಿಂದ ಟ್ಯೂನ್ ಕದಿಯುತ್ತಾರಂತೆ ಎಂಬ ಮಾತು ಎಲ್ಲಡೆ ವ್ಯಾಪಿಸಿತು. ಅದಕ್ಕೆ ಸರಿಯಾಗಿ ಗುರುಕಿರಣ್ ಹಾಡುಗಳು ಹಿಂದಿಯ ದಾಟಿಯನ್ನು ಹೋಲುತ್ತಿರುತ್ತವೆ.
ಹಿಂದೆ ಇವರು ಸಂಗೀತ ನೀಡಿದ ಪಲ್ಲಕ್ಕಿಯ ಹಾಡುಗಳು, ಇತ್ತೀಚೆಗೆ ಬಂದ ಅರಮನೆ ಚಿತ್ರದ ಹಾಡುಗಳ ಟ್ಯೂನ್‌ಗಳನ್ನು ಕೇಳುತ್ತಿದ್ದಾಗ ತಟ್ಟನೆ ಬಾಯಲ್ಲಿ ಅದೇ ದಾಟಿಯ ಹಿಂದಿ ಹಾಡು ಬಂದು ಬಿಡುತ್ತದೆ.
ಗುರು ಬಗ್ಗೆ ಮತ್ತೊಂದು ಅಪವಾದವು ಇದೆ. ಇವರ ಬಳಿ ಚಿತ್ರದ ನಿರ್ಮಾಪಕರು ಅಥವಾ ನಿರ್ದೇಶಕರು ಸಂಗೀತ ನಿರ್ದೇಶನದ ಬಗ್ಗೆ ಮಾತನಾಡಲು ಹೋದರೆ ಸ್ಯಾಂಪಲ್‌ಗೆ ಅಂತ ಕೇವಲ ಒಂದು ಟ್ಯೂನ್ ಅನ್ನು ಕೊಟ್ಟು ಬಿಡುತ್ತಾರಂತೆ.
ಹೆಚ್ಚು ಮಾತಡಿದ್ರೆ, ನಾ ಕೊಟ್ಟ ಟ್ಯೂನ್ ಏನಾಗಿದೆ ಅಂತಾರಂತೆ. ಅದೇ ಇಳೆಯರಾಜ ಇತ್ತೀಚೆಗೆ ನನ್ನವನು ಚಿತ್ರಕ್ಕೆ 40-50 ಟ್ಯೂನುಗಳನ್ನು ಕೊಟ್ಟು ನಿಮಗೆ ಇಷ್ಟವಾಗಿದ್ದನ್ನು ಆಯ್ಕೆ ಮಾಡಿ ಎಂದಿದ್ದರು. ಆದರೆ ಗುರು ಮಾತ್ರ ಯಾಕೆ ಹೀಗೆ? ಎಂಬ ಮಾತು ಗಾಂಧಿನಗರದಲ್ಲಿ ಗಿರಕಿ ಹೊಡೆಯುತ್ತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ. ಮಿತ್ರರು ನಿಮ್ಮ ಬೆಂಬಲಕ್ಕೆ ಬರಲಿದ್ದಾರೆ ಮತ್ತು ಮಹತ್ವದ ಕೆಲಸವೊಂದು ಪೂರ್ಣಗೊಳ್ಳಲಿದೆ. ನಿಮ್ಮ ಕಾರ್ಯಗಳಲ್ಲಿ ಯಶಸ್ಸು ಗಳಿಸುತ್ತೀರಿ. ನೀವೀಗ ಮನಸ್ಸಿನ ಆಶಾವಾದಿ ಚೌಕಟ್ಟಿನಲ್ಲಿದ್ದೀರಿ, ಆದರೆ ಸುವಸ್ತುಗಳಿಗಾಗಿ ನೀವು ದುಂದುವೆಚ್ಚಕ್ಕೆ ಮುಂದಾಗುವ ಸಾಧ್ಯತೆಗಳಿವೆ. |
| |
|
|
|
|
 | | pti |
| | |
| |
|
|
|
|
|
| ಚಿತ್ರ ಸುದ್ದಿ - ಕೆಲವು ನಟರು ಕನ್ನಡದಿಂದ ಪರಭಾಷಾ ಚಿತ್ರಕ್ಕೆ ನಟಿಸಲು ಹೋದರೆ ಮತ್ತೆ ಕನ್ನಡಕ್ಕೆ ಬರುವುದಿಲ್ಲ. ಉತ್ತಮ ಅವಕಾಶಗಳು ಅಲ್ಲಿ ಸಿಕ್ಕರೆ ಮತ್ತೆ ಅವರು ಕನ್ನಡಕ್ಕೆ ಬರುವುದಿಲ್ಲ. ಉದಾಹರಣೆಗೆ ನಮ್ಮ ಪ್ರಕಾಶ್ ರೈ. ಈಗ ಈ ಸಾಲಿಗೆ ನಮ್ಮ ಸುದೀಪ್ ಸೇರುತ್ತಾರೋ ಎಂಬ ಭಯ ಕನ್ನಡಿಗರನ್ನು ಕಾಡುತ್ತಿದೆ. |
| |
|
|
|
|
|
|
|