|
| ಸುದೀಪ್ ದೂರವಾಗುವರೆ? |
| ಬೆಂಗಳೂರು, ಗುರುವಾರ, 8 ಮೇ 2008 ( 13:20 IST ) | |
ಕೆಲವು ನಟರು ಕನ್ನಡದಿಂದ ಪರಭಾಷಾ ಚಿತ್ರಕ್ಕೆ ನಟಿಸಲು ಹೋದರೆ ಮತ್ತೆ ಕನ್ನಡಕ್ಕೆ ಬರುವುದಿಲ್ಲ. ಉತ್ತಮ ಅವಕಾಶಗಳು ಅಲ್ಲಿ ಸಿಕ್ಕರೆ ಮತ್ತೆ ಅವರು ಕನ್ನಡಕ್ಕೆ ಬರುವುದಿಲ್ಲ. ಉದಾಹರಣೆಗೆ ನಮ್ಮ ಪ್ರಕಾಶ್ ರೈ. ಈಗ ಈ ಸಾಲಿಗೆ ನಮ್ಮ ಸುದೀಪ್ ಸೇರುತ್ತಾರೋ ಎಂಬ ಭಯ ಕನ್ನಡಿಗರನ್ನು ಕಾಡುತ್ತಿದೆ.
ಇವರಿಗೆ ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಂಗೋಪಾಲ್ ವರ್ಮಾ ಅವರ ನಿರ್ದೇಶನದ 'ಫೂ' ಎಂಬ ಹಿಂದಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಸದ್ಯ ಸುದೀಪ್ ಅದರ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಇವರು ನಿರ್ದೇಶಿಸಿದ 'ಶಾಂತಿ ನಿವಾಸ' ಚಿತ್ರ ಹೇಳುವಂತಹ ಯಶಸ್ಸು ಕಾಣಲಿಲ್ಲ.
ನಂತರ ಸುದೀಪ್ ಅಭಿನಯಕ್ಕೆ ಮರಳಿದರು. ಇವರು ವಿಶಿಷ್ಟ ಗೆಟಪ್‌ನಲ್ಲಿ ಮಿಂಚಿದ 'ಗೂಳಿ' ಚಿತ್ರ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಇವರು ಅಭಿನಯಿಸಿದ 'ಮುಸ್ಸಂಜೆ ಮಾತು' ಹಾಗೂ 'ಕಾಮಣ್ಣನ ಮಕ್ಕಳು' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
ಈಗ ಹಿಂದಿಯಲ್ಲಿ ನಟಿಸುತ್ತಿದ್ದಾರೆ. ಅಲ್ಲಿ ಉತ್ತಮ ಅವಕಾಶಗಳು ಸಿಕ್ಕಾಗ ಕನ್ನಡ ಚಿತ್ರರಂಗದಿಂದ ಕಳೆದು ಹೋಗುತ್ತಾರೋ ಎಂಬ ಭಯ ಸಹಜವಾಗಿ ಕಾಡುತ್ತಿದೆ. ಆದರೆ ಸುದೀಪ್ ಪ್ರಕಾರ 'ನಾನು ಕನ್ನಡಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಅದಕ್ಕಾಗಿಯೇ ಒಪ್ಪಿಕೊಂಡ ಚಿತ್ರವನ್ನು ಮುಗಿಸಿದ ನಂತರ ಹಿಂದಿಯಲ್ಲಿ ನಟಿಸುತ್ತಿದ್ದೇನೆ, ಮುಂದೆಯೂ ಅಷ್ಟೆ' ಎನ್ನುತ್ತಾರೆ ಈ ನೀಳಕಾಯ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಧನ ಲಾಭದ ನಿರೀಕ್ಷೆ, ಬಂಧು ಬಳಗದವರ ಭೇಟಿಯಾಗಲಿದೆ, ಹಿರಿಯರ ಆಶಿರ್ವಾದದ ಮೂಲಕ ಹಿಡಿದ ಕಾರ್ಯಗಳಲ್ಲಿ ಯಶಸ್ಸು. ಹಿತ ಶತ್ರುಗಳ ಬಗ್ಗೆ ಎಚ್ಚರವಿರಿ. ಆರೋಗ್ಯದ ಕಡೆಗೆ ಗಮನವಿರಲಿ. ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತೆ ವಹಿಸಿ. |
| |
|
|
|
|
 | | ap |
| | |
| |
|
|
|
|
|
| ಚಿತ್ರ ಸುದ್ದಿ - ಕನ್ನಡ ಚಿತ್ರರಂಗದಲ್ಲಿ ಕೆಲವೇ ಚಿತ್ರಗಳನ್ನು ನಿರ್ಮಿಸಿ ಕ್ರಿಯೇಟಿವ್ ನಿರ್ದೇಶಕ ಎಂದು ಹೆಸರು ಗಳಿಸಿದ ಪ್ರೇಮ್ ಚಿತ್ರಕ್ಕೆ ಹೆಸರು ಇಡುವಲ್ಲಿಯೂ ನಿಸ್ಸಿಮರು. ಈ ಹಿಂದೆ ಇವರು ಕರಿಯಾ, ಎಕ್ಸ್ ಕ್ಯೂಸ್ ಮೀ, ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ... ಹೀಗೆ ವಿಶಿಷ್ಟ ರೀತಿಯ ಟೈಟಲನ್ನು ಇಟ್ಟಿದ್ದಾರೆ |
| |
|
|
|
|
|
|
|