ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಗೋವಾ-ಆಕ್ಸಿಡೆಂಟ್ ಪುರಾಣ
ಬೆಂಗಳೂರು, ಶನಿವಾರ, 29 ಮಾರ್ಚ್ 2008   ( 13:43 IST )
ರಮೇಶ್ ಅರವಿಂದ್ರವರ ಬಹು ನೀರೀಕ್ಷಿತ ಚಿತ್ರ ಆಕ್ಸಿಡೆಂಟ್ ಚಿತ್ರೀಕರಣ ಗೋವಾದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ನಡೆದ ವಿಚಿತ್ರ ಘಟನೆಯೊಂದನ್ನು ರಮೇಶ್ ಪತ್ರಕರ್ತರೊಂದಿಗೆ ಇತ್ತೀಚೆಗೆ ಹಂಚಿಕೊಂಡರು.

ಒಂದಷ್ಟು ಸಿನಿಮಾ ಸಿಡಿಗಳನ್ನು ಇಟ್ಟುಕೊಂಡು ಸೈಕಲ್ ಏರಿ ಬಂದ ಪೋರನೊಬ್ಬ ರಮೇಶ್ ಬಳಿಗೆ ಬಂದು, 'ಕನ್ನಡ ಚಿತ್ರಗಳ ಸಿಡಿ ಇದೆ ಸಾರ್, ಇಪ್ಪತ್ತೇ ರೂಪಾಯಿ, ಬೇಕಾ ಸಾರ್' ಎಂದು ಕೇಳಿದನಂತೆ. ಯಾವ ಸಿನಿಮಾದ್ದು ಇದೆಯಪ್ಪಾ ಅಂತ ಕೇಳಿದರಂತೆ ರಮೇಶ್.

ಅವನು ತೋರಿಸಿದ ಸಿಡಿಗಳಲ್ಲಿ ತಮ್ಮದೇ ನಿರ್ದೇಶನದ ರಾಮ ಶಾಮ ಭಾಮ ಚಿತ್ರದ ಸಿಡಿಯೂ ಇದ್ದುದನ್ನು ನೋಡಿ ರಮೇಶ್‌ಗೆ ಗಾಭರಿ-ಆಶ್ಚರ್ಯವಾಯಿತಂತೆ. ಏಕೆಂದರೆ ಈ ಚಿತ್ರದ ಸಿಡಿ ಅಧಿಕೃತವಾಗಿ ಬಿಡುಗಡೆಯಾಗೇ ಇಲ್ಲ.!! ಇದೆಲ್ಲ ಎಲ್ಲಯ್ಯಾ ನಿನಗೆ ಸಿಕ್ತು? ಅಂತ ರಮೇಶ್ ಕೇಳುತ್ತಿದ್ದಂತೆ ಆ ಹುಡುಗನಿಗೆ ಅಪಾಯದ ಅರಿವಾಗಿ ಓಟ ಕಿತ್ತನಂತೆ.

ವಿಡಿಯೋ ಪೈರೆಸಿ ಎಷ್ಟು ಬಲಿಷ್ಠವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಅಷ್ಟೇ ಅಲ್ಲ ಗೋವಾದಲ್ಲಿಯೂ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರು ಸಿಗುತ್ತಾರೆ ಎಂಬ ಅರಿವೂ ರಮೇಶ್‌ರಗಾಗಿದೆ. ಈ ಹಿನ್ನೆಲೆಯಲ್ಲಿ ಗೋವಾ ಮತ್ತು ಮುಂಬೈಗಳಲ್ಲಿ ಆಕ್ಸಿಡೆಂಟ್ ಚಿತ್ರವನ್ನು ರಮೇಶ್ ಬಿಡುಗಡೆ ಮಾಡಲಿದ್ದಾರಂತೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಯಾವುದು ಮೊದಲು ಗಂಗೆಯೋ, ಮೆರವಣಿಗೆಯೋ?
ಎಸ್.ನಾರಾಯಣರ ಮತ್ತೊಂದು ಚಿತ್ರ
ಸಂಚಲನೆ ಮೂಡಿಸಿದ ಸತ್ಯ ಇನ್ ಲವ್
ವಂಶಿಯಲ್ಲಿ ಪುನೀತ್ ಪುಲ್ ಬ್ಯುಸಿ
ಖಾದಿ ಡ್ರೆಸ್ಸು ಹಾಕ್ತಾರಾ ಕೆ. ಮಂಜು?
ಸತ್ಯ ಸತ್ಯಾವಾಗಿ ಕ್ಯಾಮರಾದಲ್ಲಿ ಮಿಂಚುತ್ತಿದ್ದಾರೆ!!
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮಹಿಳಾ ಮಣಿಗಳಿಗೆ ಮಣೆ: ಯಡಿಯೂರಪ್ಪ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ ....
ಹಂಸಲೇಖರಿಂದ ನಾಳೆ ಇನ್ನೊಂದು ದೇಸಿ ಹಬ್ಬ
ಬಿಜೆಪಿ ಪ್ರಚಾರಕ್ಕೆ ತಾರೆಯರ ದಂಡು
ಮನರಂಜನೆ
ಚಿತ್ರ ಸುದ್ದಿ - ಮಿಲನ ಚಿತ್ರದ ಯಶಸ್ವಿ ಜೋಡಿಗಳಾದ ನಟ ಪುನೀತ್ ರಾಜ್‌ ಕುಮಾರ್ ಮತ್ತು ನಿರ್ದೇಶಕ ಪ್ರಕಾಶ್ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೋಂ ಪ್ರೊಡಕ್ಷನಿನಲ್ಲಿ ನಿರ್ಮಾಣವಾಗುತ್ತಿರುವ ವಂಶಿ ಚಿತ್ರದಲ್ಲಿ ಅವರು ಮತ್ತೊಮ್ಮೆ ಫ್ಯಾಮಿಲಿ ಹುಡುಗನಾಗಿ ಅಭಿನಯಿಸಲಿದ್ದಾರೆ.
ಮುಂದೆ ಓದಿ|ಮತ್ತಷ್ಟು...