|
| ಹಿಟ್ ಚಿತ್ರಕ್ಕಾಗಿ ಹಂಬಲಿಸುತ್ತಿರುವ ಪ್ರೇಮ್ |
| ಬೆಂಗಳೂರು, 2 ಫೆಬ್ರವರಿ 2008 ( 11:28 IST ) | |
ನಿರಂತರ ಸೋಲಿನ ದವಡೆಯಲ್ಲೇ ಪಯಣಿಸುತ್ತಿರುವ ನಾಯಕ ನಟ ಪ್ರೇಮ್‌ಗೀಗ ಒಂದು ಹಿಟ್ ಚಿತ್ರ ಬೇಕಿದೆ. ನೆನಪಿರಲಿ ಚಿತ್ರದ ಮೂಲಕ ಅಪಾರ ಅಭಿಮಾನಿ ವೃಂದವನ್ನು ಅದರಲ್ಲೂ ಮಹಿಳಾ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಪ್ರೇಮ್ ಈಗ ಕೊಂಚ ಹತಾಶೆಯಲ್ಲಿದ್ದಾರೆ ಎಂಬುದು ಈ ಬಣ್ಣದ ಲೋಕದ ಅನಿಶ್ಚಿತತೆಗೊಂದು ಉದಾಹರಣೆ.
ನೆನಪಿರಲಿ ಚಿತ್ರದ ನಂತರ ಬಂದ ಜೊತೆ ಜೊತೆಯಲಿ ಚಿತ್ರವನ್ನು ಬಿಟ್ಟರೆ ಮತ್ಯಾವುದೂ ಯಶಸ್ಸಿನ ರುಚಿ ಕಂಡಿರಲಿಲ್ಲ. ಪಲ್ಲಕ್ಕಿ, ಗುಣವಂತ, ಸವಿ ಸವಿ ನೆನಪು ಚಿತ್ರಗಳು ಪ್ರೇಕ್ಷಕರನ್ನು ಆಕರ್ಷಿಸದಿದ್ದಾಗ ಪ್ರೇಮ್ ನೆಚ್ಚಿಕೊಂಡದ್ದು ರತ್ನಜಾರವರ ಹೊಂಗನಸು ಚಿತ್ರವನ್ನು.
ಆದರೆ ಹೊಂಗನಸು ಚಿತ್ರಕ್ಕೆ ಅಂಥಾ ಪ್ರೋತ್ಸಾಹ ಸಿಗದಿರುವುದು ಪ್ರೇಮ್‌ರನ್ನು ಆತ್ಮವಿಮರ್ಶೆಗೆ ತೊಡಗಿಸಿದೆ. ತಾವು ಎಡವಿದ್ದು ಎಲ್ಲಿ ಎಂಬುದನ್ನು ಅವಲೋಕನ ಮಾಡಿಕೊಳ್ಳುತ್ತಿರುವ ಸಹೃದಯಿ ಪ್ರೇಮ್‌ವರೀಗೀಗ ಒಂದು ಉತ್ತಮ ಚಿತ್ರ ಬೇಕಾಗಿದೆ. ಚಿತ್ರರಂಗದಲ್ಲಿರುವ ಖ್ಯಾತನಾಮರೂ ಕೂಡ ಒಂದಲ್ಲಾ ಒಂದು ಅವಧಿಯಲ್ಲಿ ವೈಫಲ್ಯದ ಸುಳಿಯಲ್ಲೇ ಸಿಕ್ಕವರು, ಇದಕ್ಕಾಗಿ ಹತಾಶರಾಗುವುದು ಬೇಡ ಎಂದು ಪ್ರೇಮ್‌ಗೆ ನೆನಪಿಸಿ ಅವರಿಗೆ ಬೆಸ್ಟ್ ವಿಷಸ್ ಹೇಳೋಣವೇ?
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೇಶ - ಬಂಗಾಳ ಕೊಲ್ಲಿಯಲ್ಲಿ ಭಾರತದ ಹೊಸ ನೌಕೆಯಾದ ಐಎನ್‌ಎಸ್ 'ಜೆಲ್ಸೆವಾ'ದಲ್ಲಿ ತರಬೇತಿ ನಡೆಸುತ್ತಿರುವ ವೇಳೆ, ನೌಕಾ ಅಪಘಾತ ಸಂಭವಿಸಿದ ಪರಿಣಾಮವಾಗಿ ಐದು ಜನರು ಸಾವಿಗೀಡಾಗಿದ್ದು, ಮೂವರು ಗಾಯಗೊಂಡಿದ್ದಾರೆ. |
| |
|
|
|
|
 | | nrb |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಇದೇನೀದು ತಲೆಬರಹ, ವಿಚಿತ್ರವಾಗಿದೆಯಲ್ಲ ಎನ್ನುವೀರೇನು?, ಹೌದು, ಆಧುನಿಕ ಕಾಲದಲ್ಲಿಯೂ ಸಹ ನಮ್ಮ ಪುರಾತನ ಗಾದೆಗಳು ನಿಜವಾಗುತ್ತವೆ ಮತ್ತು ಚಾಲ್ತಿಯಲ್ಲಿರುತ್ತವೆ ಎನ್ನುವುದಕ್ಕೆ ಮತ್ತು ಈ ಗಾದೆಗೆ ಪುಷ್ಠಿ ನೀಡಲು... |
| |
|
|
|
|
|
|
|