ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಮನರಂಜನೆ ಚಿತ್ರ ಸುದ್ದಿ
ಪುನೀತ‌್‌ರ ಭರ್ಜರಿ 'ಮಿಲನ'
ಬೆಂಗಳೂರು (ಏಜೆನ್ಸಿ), ಬುಧವಾರ, 14 ನವೆಂಬರ್ 2007   ( 13:10 IST )
ಪ್ರಕಾಶ್ ನಿರ್ದೇಶನದ 'ಮಿಲನ' ರಾಜ್ಯಾದ್ಯಂತ ಭರ್ಜರಿಯಾಗಿ ಓಡುತ್ತಿದೆ. 37 ಕೇಂದ್ರಗಳಲ್ಲಿ ಅರ್ಧಶತಕ ಬಾರಿಸಿರುವ 'ಮಿಲನ' ಒಳ್ಳೆಯ ಗಳಿಕೆ ದಾಖಲಿಸುತ್ತಿದೆ.

ಈ ಸಂತೋಷ ಹಂಚಿಕೊಳ್ಳುವುದಕ್ಕೆ ಮೊನ್ನೆ ಪತ್ರಕರ್ತರೊಂದಿಗೆ 'ಮಿಲನ' ಕೂಟ ಹಮ್ಮಿಕೊಂಡಿದ್ದರು ನಿರ್ದೇಶಕ ಪ್ರಕಾಶ್. 'ರಿಷಿ' ಮತ್ತು 'ಶ್ರೀ' ಚಿತ್ರಗಳ ನಂತರ ಅಪರೂಪಕ್ಕೆ ಸಿಕ್ಕಿದ ಈ ಗೆಲುವು ಪ್ರಕಾಶ್ ಆತ್ಮವಿಶ್ವಾಸವನ್ನು ಸಹಜವಾಗಿಯೇ ಇಮ್ಮಡಿಸಿದೆ.

ಮುಖ್ಯವಾಗಿ 'ಮಿಲನ' ಚಿತ್ರದ ಪ್ಲಸ್ ಪಾಯಿಂಟ್ 'ನಿನ್ನಿಂದಲೇ... ನಿನ್ನಿಂದಲೇ.. ಕನಸೊಂದು ಶುರುವಾಗಿದೆ.. ಎಂಬ ಜಯಂತ್ ಕಾಯ್ಕಣಿ ಬರೆದ ಹಾಡು. ಇದನ್ನು ಪ್ರಕಾಶ್ ಹೇಳಿಕೊಂಡರು ಕೂಡ.

ಪತ್ರಿಕಾಗೋಷ್ಠಿಯುದ್ದಕ್ಕೂ ಚಿತ್ರದ ನಿರ್ಮಾಪಕ ದುಷ್ಯಂತರನ್ನು ಚಿತ್ರ ತಂಡ ಹಾಡಿಹೊಗಳಿದ್ದು ವಿಶೇಷ. 'ಮಿಲನ'ದ ಭರ್ಜರಿ ಗೆಲುವಿನಿಂದ ಪ್ರೇರಿತರಾಗಿರುವ ದುಷ್ಯಂತ್, ಮುಂದಿನ ವರ್ಷ ಕನಿಷ್ಠ ನಾಲ್ಕು ಚಿತ್ರ ಮಾಡಲು ನಿರ್ಧರಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅವರ ಮುಂದಿನ ಚಿತ್ರ 'ಮತ್ತುರಾಜ್'. ಶಿವರಾಜ್‌ ಕುಮಾರ್ ಚಿತ್ರದ ನಾಯಕ. ಆ ಚಿತ್ರಕ್ಕೂ ಪ್ರಕಾಶ್ ಅವರೇ ನಿರ್ದೇಶಕರ ಅನ್ನೋ ಗುಟ್ಟನ್ನ ಮಾತ್ರ ಅವರು ಬಿಟ್ಟುಕೊಡಲಿಲ್ಲ.

ಅಂದಹಾಗೆ ಪುನೀತ್ ಅವರ ಮುಂದಿನ ಚಿತ್ರವನ್ನೂ ಪ್ರಕಾಶ್ ಅವರೇ ನಿರ್ದೇಶಿಸಲಿದ್ದಾರಂತೆ. ವಜ್ರೇಶ್ವರಿ ಕಂಬೈನ್ಸ್ ಈ ಚಿತ್ರ ನಿರ್ಮಿಸಲಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವರ್ಮಾ ಕಂಪನಿಯಲ್ಲಿ ಸುದೀಪ್
'ಬುದ್ಧಿವಂತ'ನಾದ ಉಪೇಂದ್ರ !
ಮತ್ತೊಮ್ಮೆ ಜತೆಗೂಡಲಿರುವ ಕರೀನಾ, ಭಾರದ್ವಜ್
ಹಾಲಿ ಬೋಲ್: ಜೆಸ್ಸಿಕಾ ಲಾಲ್ ಪ್ರಕರಣದ ನೆರಳು
ಲವರ್ ಬಾಯ್ ಆಗುವತ್ತ ಶಹೀದ್
ಹಾಲಿವುಡ್‌ನತ್ತ ಹೃತಿಕ್ ರೋಷನ್
ಗ್ರಹ ಗತಿ
ಸಾಪ್ತಾಹಿಕ - ಎಲ್ಲ ಕಡೆಗಳಿಂದಲೂ ನಿಮಗೆ ಅನುಕೂಲವಾಗಲಿದೆ. ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
AP
 
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಇತ್ತೀಚೆಗಿನ ಟ್ವೆಂಟಿ20 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಶ್ವ ಕಪ್ ತಂದ...
ರಾಹುಲ್ ಗಾಂಧಿ ಭವಿಷ್ಯ ಹೇಗಿದೆ?
ಜೂಹಿ ಬಬ್ಬರ್ ಉಜ್ವಲ ಭವಿಷ್ಯ
ಸಾಹಿತ್ಯ
ಪ್ರೇಮಗಾಥೆ - ಮರೀನಾ ಬೀಚ್‌ನ ಸಂಜೆಗೆಂಪಿನ ಕಡಲ ಕಿನಾರೆಯಲ್ಲಿ ಕಲರವ ಕೇಳಿಬರುತ್ತಿತ್ತು. ಬಿಸಿಲ ಧಗೆಗೆ ಬಳಲಿದ ನೂರಾರು ಹುಡುಗರು ಉಪ್ಪು ನೀರಿನಲ್ಲಿ ಈಜು ಬಿದ್ದಿದ್ದರು. ಉಕ್ಕಿ ಬರುವ ನೊರೆ ನೊರೆ ಅಲೆಯಲ್ಲಿ ಕಾಲು ಕುಣಿಸುತ್ತಾ
ಮುಂದೆ ಓದಿ|ಮತ್ತಷ್ಟು...
Marketplace