|
| ಮುಂಗಾರು ಮಳೆಗೆ ನೂರರ ಸಂಭ್ರಮ |
| ಬೆಂಗಳೂರು (ಏಜೆನ್ಸಿ), ಶನಿವಾರ, 7 ಏಪ್ರಿಲ್ 2007 | |
ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯಕ್ಕೆ ಇದು ನಾಂದಿ ಹಾಡಿದೆ. ಮಚ್ಚು, ಲಾಂಗು ಚಿತ್ರಗಳಿಗೆ ಭವಿಷ್ಯವಿಲ್ಲ ಎಂಬುದನ್ನೂ ಇವು ಪ್ರೂವ್ ಮಾಡಿವೆ.
ಗಾಂಧಿ ನಗರದಲ್ಲಿ ಎಲ್ಲರ ಬಾಯಲ್ಲೂ ಮಳೆಯದ್ದೇ ಸುದ್ದಿ. ಹನಿಹನಿ ಪ್ರೇಮ ಕಹಾನಿಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಿದ್ದಾರೆ. ಚಿತ್ರದ ತಂಡದಲ್ಲಿ ಒಡಕುಂಟಾಗಿದೆ, ಯೋಗರಾಜ ಭಟ್ಟರು ಮುನಿಸಿಕೊಂಡಿದ್ದಾರೆ ಎಂಬುದರಿಂದ ತೊಡಗಿ ಗಾಸಿಪ್ ಗಳು ಎಲ್ಲೆಂದರಲ್ಲಿ ಹಬ್ಬತೊಡಗಿವೆ.
ಆದರೆ ಈ ಚಿತ್ರದಿಂದಾಗಿ ಭಟ್ಟರು, ಕ್ಯಾಮರಾ ಮೆನ್ ಕೃಷ್ಣ, ನಟ ಗಣೇಶ್ ಸೇರಿದಂತೆ ಎಲ್ಲರ ಗ್ರಾಫೂ ಮೇಲೇರಿದೆ. ಚಿತ್ರಕ್ಕೊಂದು ಒಳ್ಳೆಯ ಕಥೆ ಬರೆದ ಪ್ರೀತಂ, ಸುಮಧುರ ಹಾಡುಗಳನ್ನು ಬರೆದ ಜಯಂತ ಕಾಯ್ಕಿಣಿ ಹೀಗೆ ಎಲ್ಲರೂ ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದಾರೆ.
ಏನೆಂದರೂ ಚಿತ್ರ 20 ಕೋಟಿಯನ್ನು ಕಂಡಿದೆ. ಬೆಂಗಳೂರಿನ 13 ಥಿಯೇಟರುಗಳು ಸೇರಿದಂತೆ ರಾಜ್ಯದ 83 ಕಡೆ ಮಳೆ ವಿಜಯದ ನಗೆ ಬೀರುತ್ತಿದೆ.
ಆದರೆ ಈ ದಾಖಲೆಯ ಬಗ್ಗೆ ನಿರ್ಮಾಪಕ ಕೃಷ್ಣಪ್ಪ ಒಂದಿಷ್ಟೂ ವಿಚಲಿತರಾಗಿಲ್ಲ. ಒಳ್ಳೆಯ ಸಿನೆಮಾ ಒಂದರ ನಂತರ ಮತ್ತೊಂದೆಂಬಂತೆ ಮಾಡ್ತಾ ಹೋಗ್ತೀನಿ ಅಂತಾರೆ. ಇಂಥಾ ಹಿಟ್ ಚಿತ್ರ ನೀಡಿದ ಮೇಲೂ ಅವರು ಹೇಳೋದು ಹೀಗೆ. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಮಂಗಳೂರು ಹೊರತು ಪಡಿಸಿದರೆ ಉಳಿದೆಡೆಗೆ ಚಿತ್ರದ ಹಂಚಿಕೆಯೂ ಇವರದೇ. ಹಾಗಾಗಿ ಲಾಭದ ಬಹುಪಾಲು ನಿರ್ಮಾಪಕರ ಥೈಲಿಯಲ್ಲೇ ಇದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|