ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಗ್ರಹ ಗತಿ ವಾಸ್ತು
ಸಂತೋಷ, ಐಶ್ವರ್ಯಕ್ಕೆ 'ಲಕ್ಕಿ ಬಾಂಬೂ'
ಸೋಮವಾರ, 17 ನವೆಂಬರ್ 2008   ( 16:36 IST )
'ಲಕ್ಕಿ ಬಾಂಬೂ' ಎಂದು ಕರೆಯಲ್ಪಡುವ 'ಭಾಗ್ಯ ಬಿದಿರು' ಎಂಬ ಸಸ್ಯವು ಮನೆಗೆ ಭಾಗ್ಯವನ್ನು ತರುತ್ತದೆ ಎಂದು ಫೆಂಗ್‌ಶುಯಿ ಹೇಳುತ್ತದೆ. ಬಾಂಬೂ ಎಂದು ಕರೆಯಲ್ಪಟ್ಟರೂ ಇದು ಬಿದಿರಿನ ವರ್ಗಕ್ಕೆ ಸೇರಿದ ಸಸ್ಯವಲ್ಲ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು ಪ್ರದಾನ ಮಾಡುತ್ತದೆ ಮತ್ತು ಇದನ್ನು ಯೋಗ್ಯ ದಿಕ್ಕಿನಲ್ಲಿರಿಸುವುದರಿಂದ ಅಭಿವೃದ್ಧಿ ಸುನಿಶ್ಚಿತ ಎಂದು ಫೆಂಗ್‌ಶುಯಿ ವಿಶ್ವಾಸ. ಉತ್ತಮ ಆರೋಗ್ಯಕ್ಕಾಗಿ ಇದನ್ನು ಪೂರ್ವ ದಿಕ್ಕಿನಲ್ಲಿಯೂ, ಧನಲಭ್ಯತೆಗಾಗಿ ಆಗ್ನೇಯ ದಿಕ್ಕಿನಲ್ಲಿಯೂ ಇರಿಸುವುದು ಸೂಕ್ತವಾಗಿದೆ. ಆ ಸಸ್ಯದ ಕಾಂಡಗಳನ್ನು ಕೆಂಪು ರಿಬ್ಬನ್‌ನಿಂದ ಸುತ್ತಿದರೆ ಅದು ಚೈತನ್ಯವನ್ನು ಉತ್ಪಾದಿಸುತ್ತದೆ ಎಂದು ನಂಬಲಾಗುತ್ತದೆ.

ಕಾಂಡಗಳನ್ನಿರಿಸುವಾಗ ಅವುಗಳ ಸಂಖ್ಯೆಗಳಲ್ಲಿ ಜಾಗರೂಕರಾಗಿರಬೇಕು.
1. ಮೂರು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಅದು ಸಂತೋಷ ಪ್ರದಾಯಕ.
2. ಐದು ಕಾಂಡಗಳನ್ನು ಒಟ್ಟೊಟ್ಟಿಗೆ ಇರಿಸಿದರೆ ಧನಲಾಭವಾಗುತ್ತದೆ.
3. ಇಪ್ಪತ್ತೊಂದು ಕಾಂಡಗಳನ್ನು ಒಟ್ಟೊಟ್ಟಿಗೆ ಇರಿಸುವುದರಿಂದ ಸರ್ವೈಶ್ವರ್ಯಗಳು ಬಾಗಿಲಿಗೆ ಬಂದು ಸೇರುವುವು.
4. ನಾಲ್ಕು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಮರಣ ಎಂಬ ಪ್ರತೀತಿ ಇದೆ. ಅದು ಹೇಗೆಂದರೆ Four- ಫೋರ್ ಎಂಬ ಪದಕ್ಕೆ ಸದೃಶವಾಗಿರುವ ಪದವು ಚೈನಾದಲ್ಲಿ ಮರಣವೆಂಬ ಅರ್ಥವನ್ನು ಹೊಂದಿದೆ. ಆದುದರಿಂದ ನಾಲ್ಕು ಕಾಂಡಗಳನ್ನು ಒಟ್ಟಿಗೆ ಎಂದೂ ಬಳಸಬಾರದು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಟ್ಟಡ, ಜಮೀನಿನಲ್ಲಿ ವಾಸ್ತು ಪಾತ್ರ
ವರ್ಣಚಿತ್ರಗಳ ಮಾನಸಿಕ ಪರಿಣಾಮ
ಭೋಜನ ಕೋಣೆ ಹೇಗಿದ್ದರೆ ಚೆನ್ನ?
ಮನೆಗೆ ಐಶ್ವರ್ಯತರುವ 'ಭಾಗ್ಯ ಬಿದಿರು'
ಓದುವ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ?
ಪ್ರಕೃತಿ ವಿಕೋಪ ತಡೆಯಲು ವಾಸ್ತುಶಾಸ್ತ್ರ !
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ತಪ್ಪಾಗಿ ಅರ್ಥೈಸಲಾಗಿದೆ: ಪೇಜಾವರ ಶ್ರೀ
ದಲಿತರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಧರ್ಮಾಂತರಗೊಳ್ಳುವ ಕುರಿತಾಗಿ ತಮ್ಮ ...
ಪ್ರಿಯತಮೆಗಾಗಿ ಪತ್ನಿಯನ್ನು ಕೊಂದ ಟೆಕಿ
ಬಿಜೆಪಿಯತ್ತ ವೆಂಕಟಾಚಲಯ್ಯ ಚಿತ್ತ
ಮನರಂಜನೆ
ಹೊಸ ಚಿತ್ರ - ಮುಂಗಾರು ಮಳೆ ಚಿತ್ರ ಹಿಟ್ ಆದ ನಂತರ ಮಳೆ ಹೆಸರಿನ ಸಾಕಷ್ಟು ಚಿತ್ರಗಳು ತೆರೆಗೆ ಬಂದಷ್ಟೆ ವೇಗದಲ್ಲಿ ಮರೆಯಾಗಿದೆ. ಇದೀಗೆ ಅಮಿತ್ ನಿರ್ದೇಶನದ ‘ಮುಂಗಾರಿನ ಮೊದಲ ಹನಿ’ ಸಿನಿಮಾ ಸೆಟ್ಟೇರುತ್ತಿದೆ.
ಮುಂದೆ ಓದಿ|ಮತ್ತಷ್ಟು...