|
| ವರ್ಣಚಿತ್ರಗಳ ಮಾನಸಿಕ ಪರಿಣಾಮ |
ಫೆಂಗ್‌ಶುಯಿ ಶಾಸ್ತ್ರ ಹೇಳುವಂತೆ ಮನೆಯೊಳಗೆ ಇರಿಸುವಂತಹ ವರ್ಣಚಿತ್ರಗಳು ಮನೆಯಲ್ಲಿ ಜೀವಿಸುವವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ತೂಗುಹಾಕುವುದರಿಂದ ಮನೆಯೊಳಗೆ ಸಕಾರಾತ್ಮಕ ಚೈತನ್ಯ ಮೂಡಿ ಬರುವುದು ಎಂದು ಶಾಸ್ತ್ರವು ಹೇಳುತ್ತದೆ.
ಮಲಗುವ ಕೋಣೆಯಲ್ಲಿ ನಗುವ ಮಗು, ಹೂವಿನ ಚಿತ್ರಗಳನ್ನಿರಿಸುವುದರಿಂದ ಮನಸ್ಸಿಗೆ ಹಿತಕರವಾಗಿ ಚೆನ್ನಾಗಿ ನಿದ್ದೆಮಾಡಲು ಸಹಕಾರಿಯಾಗಿದೆ.
ಕೆಲವು ಉದಾಹರಣೆಗಳು: *ಸೂರ್ಯೋದಯ, ಪರ್ವತಗಳ ಚಿತ್ರಗಳು ಶುಭ ನಿರೀಕ್ಷೆಯನ್ನು ಸೂಚಿಸುತ್ತವೆ.
*ಕುರಿಮರಿಗಳ ಚಿತ್ರ ಭಾಗ್ಯದ ಪ್ರತೀಕ.
*ಈಜುವ ಮೀನಿನ ಚಿತ್ರವು ದೀರ್ಘಕಾಲ ಬಾಳ್ವಿಕೆಯನ್ನು ಪ್ರತಿಬಿಂಬಿಸುತ್ತದೆ.
*ನಗುಮುಖದ ವ್ಯಕ್ತಿಗಳ ಚಿತ್ರಗಳು ಧನಾತ್ಮಕ ಅನುಭವಗಳನ್ನು ಮೈಗೂಡಿಸಲು ಸಹಾಯಕವಾಗುತ್ತದೆ.
*ಕಡು ಬಣ್ಣದ ಅಥವಾ ದಟ್ಟವಾದ ಬಣ್ಣದ ಚಿತ್ರಗಳು ಅನಾರೋಗ್ಯವನ್ನುಂಟುಮಾಡುತ್ತವೆ.
*ರೇಖಾಗಣಿತದ ಆಕೃತಿಗಳನ್ನು ಹೋಲುವ ವರ್ಣ ಚಿತ್ರಗಳು ಮನಸ್ಸಿನ ಮೇಲೆ ಹಾನಿಕರವಾದ ಪರಿಣಾಮಗಳನ್ನು ಬೀರುವುದು.
*ಕ್ರೂರ ಮೃಗಗಳ ಅಥವಾ ಭಯಾನಕ ಚಿತ್ರಗಳು ಆರೋಗ್ಯವನ್ನು ಕೆಡಿಸುತ್ತದೆ.
ಈ ರೀತಿ ಸೂಕ್ತವಾದ ಉತ್ತಮ ಚಿತ್ರಗಳನ್ನು ಕೋಣೆಯೊಳಗಿರಿಸುವುದರಿಂದ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ದೊರಕುವುದು ಎಂಬುದಾಗಿ ಫೆಂಗ್‌ಶುಯಿ ಹೇಳುತ್ತದೆ. ಹಾಗಾಗಿ ನೀವು ನಂಬುವುದಾದಲ್ಲಿ ಗೋಡೆ ಮೇಲೆ ಚಿತ್ರ ತೂಗು ಹಾಕುವಾಗ ಈ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿಕಿತ್ಸೆ - ನಿಮ್ಮ ಕೂದಲನ್ನು ವಾರಕ್ಕೆರಡು ಬಾರಿ ಮಾತ್ರ ತೊಳೆಯಿರಿ. ತೊಳೆಯಲು ಬಿಸಿನೀರನ್ನು ಬಳಸುವುದು ಬೇಡ. ಕೂದಲು ತೊಳೆಯಲು ಶ್ಯಾಂಪು ಬಳಸುತ್ತಿದ್ದರೆ, ಸೌಮ್ಯವಾದ ಶ್ಯಾಂಪೂಗಳನ್ನು ಬಳಸುವುದು ಉತ್ತಮ. |
| |
|
|
|
|
 | | NRB |
| | |
| |
|
|
|
|
|
| ವಾಸ್ತು - ಮನೆಯಲ್ಲಿ ಭೋಜನ ಕೋಣೆ ಬಹು ಪ್ರಮುಖವಾದುದು, ಹಾಗಾಗಿ ಇದರ ಬಗ್ಗೆಯೂ ಗಮನ ಹರಿಸಬೇಕಾದುದು ಅತಿ ಮುಖ್ಯ. ಯಾಕೆಂದರೆ ನಾವು ಆಹಾರ ಸೇವಿಸುವ ಸ್ಥಳ ಅಥವಾ ಪರಿಸರ ಉತ್ತಮ ಮತ್ತು ಆರಾಮದಾಯಕವಾಗಿದ್ದರೆ ಮಾತ್ರ ಆಹಾರವು ಸರಿಯಾಗಿ ಪಚನಗೊಳ್ಳುವುದು. ಸೂಕ್ತ ಸ್ಥಳದಲ್ಲಿ ಆಹಾರ ಸೇವಿಸುವುದರಿಂದ ದೇಹಕ್ಕೆ ಆರೋಗ್ಯವೂ, ಮನಸ್ಸಿಗೆ ಹಿತವೂ ಲಭಿಸುತ್ತದೆ. |
| |
|
|
|
|
|
|
|