ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಗ್ರಹ ಗತಿ ವಾಸ್ತು
ಮನೆಗೆ ಐಶ್ವರ್ಯತರುವ 'ಭಾಗ್ಯ ಬಿದಿರು'
ಫೆಂಗ್‌ಶುಯಿ ಹೇಳುವಂತೆ 'ಭಾಗ್ಯ ಬಿದಿರು' ಎಂಬ ಸಸ್ಯ ಮನೆಗೆ ಭಾಗ್ಯವನ್ನು ತರುತ್ತದೆ. ಇದನ್ನು 'ಲಕ್ಕಿ ಬ್ಯಾಂಬೂ' ಎಂದು ಕರೆಯುತ್ತಾರೆ. ನೀರಿನಲ್ಲಿರಿಸಿ ಬೆಳೆಸಬಹುದಾದ ಈ ಸಸ್ಯವು ಮನೆಗೆ ಐಶ್ವರ್ಯ ಮತ್ತು ಆರೋಗ್ಯವನ್ನು ನೀಡುತ್ತದೆ ಮತ್ತು ಇದನ್ನು ಯೋಗ್ಯ ದಿಕ್ಕಿನಲ್ಲಿರಿಸುವುದರಿಂದ ಮನೆಯಲ್ಲಿ ಅಭಿವೃದ್ಧಿ ಸಾಧ್ಯ ಎಂಬುದು ಫೆಂಗ್‌ಶುಯಿ ವಿಶ್ವಾಸ.

ಧನಲಾಭಕ್ಕಾಗಿ ಇದನ್ನು ಆಗ್ನೇಯ ದಿಕ್ಕಿನಲ್ಲಿಯೂ, ಉತ್ತಮ ಆರೋಗ್ಯಕ್ಕಾಗಿ ಇದನ್ನು ಪೂರ್ವ ದಿಕ್ಕಿನಲ್ಲಿಯೂ ಇರಿಸುವುದು ಸೂಕ್ತ. ಸಸ್ಯದ ಕಾಂಡಗಳನ್ನು ಕೆಂಪು ರಿಬ್ಬನ್‌ನಿಂದ ಸುತ್ತಿದರೆ ಅದು ಚೈತನ್ಯ ಉಂಟುಮಾಡುತ್ತದೆ ಎಂದು ನಂಬಲಾಗುತ್ತದೆ.

ಕಾಂಡಗಳನ್ನಿರಿಸುವ ವೇಳೆ ಅವುಗಳ ಸಂಖ್ಯೆಗಳಲ್ಲೂ ಜಾಗೃವಹಿಸಬೇಕು.
1. ಮೂರು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಸಂತೋಷ ಹೆಚ್ಚಾಗುತ್ತದೆ.
2. ಐದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸಿದರೆ ಧನಲಾಭವಾಗುತ್ತದೆ.
3. ಇಪ್ಪತ್ತೊಂದು ಕಾಂಡಗಳನ್ನು ಒತ್ತೊಟ್ಟಿಗೆ ಇರಿಸುವುದರಿಂದ ಸರ್ವೈಶ್ವರ್ಯಗಳು ಸಿದ್ದಿಸುವುದು.
4. ನಾಲ್ಕು ಕಾಂಡಗಳನ್ನು ಒಟ್ಟಿಗೆ ಕಟ್ಟಿದರೆ ಮರಣ ಎಂಬ ಪ್ರತೀತಿ ಇದೆ. ಅದು ಹೇಗೆಂದರೆ Four- ಫೋರ್ ಎಂಬ ಪದಕ್ಕೆ ಸದೃಶವಾಗಿರುವ ಪದವು ಚೈನಾದಲ್ಲಿ ಮರಣವೆಂಬ ಅರ್ಥವನ್ನು ಹೊಂದಿದೆ.

ಬೆಳೆಸುವ ವಿಧಾನ
ಇದನ್ನಿರಿಸುವ ನೀರಿನಲ್ಲಿ ಕ್ಲೋರಿನ್ ಅಂಶ ಇರದಂತೆ ಜಾಗ್ರತೆವಹಿಸಬೇಕು. ಮತ್ತು ಅಲ್ಪ ಸೂರ್ಯಪ್ರಕಾಶ ತಾಗುವಂತಿರಬೇಕು. ಅತಿ ಉಷ್ಣಾಂಶವಿದ್ದರೆ ಇವುಗಳು ಹಳದಿ ಬಣ್ಣಕ್ಕ ತಿರುಗುತ್ತವೆ. ಹಾಗಾಗಿ ಕೋಣೆಯ ಉಷ್ಣತೆ ಮಿತವಾಗಿರಲಿ. ಎಳೆ ಕಾಂಡದ ಕತ್ತರಿಸಿದ ಭಾಗಗಳನ್ನು ನೀರಿನಲ್ಲಿರಿಸಿದರೆ ಅವುಗಳು ಕ್ರಮೇಣ ಬೆಳೆಯಲಾರಂಭಿಸುತ್ತವೆ.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಓದುವ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ?
ಪ್ರಕೃತಿ ವಿಕೋಪ ತಡೆಯಲು ವಾಸ್ತುಶಾಸ್ತ್ರ !
ಪ್ರವೇಶ ದ್ವಾರದೆದುರು ಪ್ರಭಾವ ಬಿರುವ ಚಿತ್ರವಿರಲಿ!
ತೊಲೆಗಳು
ಒಟ್ಟು ಭೋಜನ-ಸುಖಜೀವನ
ಗಾಳಿಗಂಟೆಗಳು
ಗ್ರಹ ಗತಿ
ವಾಸ್ತು - ಮನೆಯಲ್ಲಿ ಓದುವ ಕೋಣೆಗೆ ಪೂಜಾ ಕೋಣೆಯಂತೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಕಾರಣ ಅಲ್ಲಿ ಸರಸ್ವತಿ ನೆಲೆಯೂರಿದರೆ ಮಾತ್ರ ವಿದ್ಯೆಯು ಪ್ರಧಾನವಾಗುವುದು ಎಂಬ ನಂಬಿಕೆ ಭಾರತೀಯರಲ್ಲಿ ಗಾಡವಾಗಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
NRB
 
ಕನ್ನಡ ಮನಸುಗಳ ತಣಿಸಿದ ನುಡಿಸಿರಿ
ಮುದುಡಿದಂತಿದ್ದ ಮನಸ್ಸುಗಳು ಮುದಗೊಂಡವು ಇಲ್ಲಿ. ಪ್ರೇರಣೆಯ ಕೊರತೆ ಕಾಡುತ್ತಿದ್ದ ಕನ್ನಡ ...
'ಆಶ್ಚರ್ಯ' ಶಬ್ದದ ನಿಜಾರ್ಥ ಗೊತ್ತಾಗಿದ್ದು ನುಡಿಸಿರಿಯಲ್ಲಿ..!
ಮೌಲ್ಯ ಬಿಟ್ಟು ಪ್ರಸಿದ್ಧಿ ಬಯಸದಿರಿ: ಯುವಕರಿಗೆ ಆಳ್ವಾ ಕಿವಿಮಾತು
ವಾಣಿಜ್ಯ
ವಾಣಿಜ್ಯ ಲೇಖನಗಳು - ಯಾವುದೇ ಒಂದು ದೇಶದಲ್ಲಿ ವಕೀಲರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅಲ್ಲಿ ವಾದ-ವಿವಾದಗಳ ಸಂಖ್ಯೆ ಹೆಚ್ಚುತ್ತಲಿದೆ ಎಂದರ್ಥ. ಯಾವುದೇ ಒಂದು ದೇಶದಲ್ಲಿ ಪೊಲೀಸ್ ಸಂಖ್ಯೆ
ಮುಂದೆ ಓದಿ|ಮತ್ತಷ್ಟು...
Marketplace