|
| ಓದುವ ಕೋಣೆ ಯಾವ ದಿಕ್ಕಿನಲ್ಲಿದ್ದರೆ ಉತ್ತಮ? |
ಮನೆಯಲ್ಲಿ ಓದುವ ಕೋಣೆಗೆ ಪೂಜಾ ಕೋಣೆಯಂತೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಕಾರಣ ಅಲ್ಲಿ ಸರಸ್ವತಿ ನೆಲೆಯೂರಿದರೆ ಮಾತ್ರ ವಿದ್ಯೆಯು ಪ್ರಧಾನವಾಗುವುದು ಎಂಬ ನಂಬಿಕೆ ಗಾಡವಾಗಿದೆ.
ವಿದ್ಯಾರ್ಜನೆಯ ಸಫಲತೆಗೆ ಮನೆಯಲ್ಲಿರುವ ಓದುವ ಕೋಣೆ ಮತ್ತು ಅದರ ವಾಸ್ತುಶಾಸ್ತ್ರವು ಪ್ರಮುಖಪಾತ್ರವನ್ನು ವಹಿಸುತ್ತದೆ. ಹಾಗಾಗಿ ಮನೆಯಲ್ಲಿ ಓದುವ ಕೋಣೆಯನ್ನು ಆರಿಸುವಾಗ ಬಹಳ ಜಾಗರೂಕರಾಗಿರಬೇಕು. ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ಭಾಗದಲ್ಲಿರುವ ಕೋಣೆಗಳನ್ನು ಓದುವ ಕೋಣೆಯಾಗಿ ಬಳಸಿದರೆ ಉತ್ತಮ.
ಈ ದಿಕ್ಕುಗಳು ಕಲಿಕೆಯಲ್ಲಿ ಗಮನವೀಯಲು ಮತ್ತು ಕಲಿತ ವಿಷಯಗಳನ್ನು ಬೇಗನೆ ಮನದಟ್ಟು ಮಾಡಲು ಸಹಕರಿಸುತ್ತವೆ. ಓದುವ ಕೋಣೆಯಲ್ಲಿ ಗಣಪತಿಯ ಹಾಗೂ ಸರಸ್ವತಿಯ ಚಿತ್ರವಿರಲಿ. ಇಲ್ಲಿ ಪುಸ್ತಕಗಳನ್ನು ನೈಋತ್ಯ, ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿರಿಸಿ. ಈಶಾನ್ಯಭಾಗದಲ್ಲಿ ಇರಿಸಲೇಬೇಡಿ. ಕಾರಣ ಈ ಭಾಗದಲ್ಲಿ ಹೆಚ್ಚು ಭಾರವಿರಿಸುವುದರಿಂದ ಅದು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ಕಲಿಕೆಗಾಗಿ ಬಳಸುವ ಮೇಜು ಕುರ್ಚಿಗಳು ಗೋಡೆಯಿಂದ 3 ಅಡಿ ಅಂತರದಲ್ಲಿರುವಂತೆ ಇರಿಸಿ. ಅಧ್ಯಯನದ ಪುಸ್ತಕಗಳನ್ನು ಕವಾಟಿನಲ್ಲಿ ಮುಚ್ಚಿಡುವುದು ಉತ್ತಮ ಯಾಕೆಂದರೆ ಇದು ಚೈತನ್ಯವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಯು ಕಲಿಕೆಗಾಗಿ ಟೇಬಲ್ ಲ್ಯಾಂಪ್ ಬಳಸುತ್ತಿದ್ದರೆ ಅದನ್ನು ಆಗ್ನೇಯ ದಿಕ್ಕಿನಲ್ಲಿರಿಸಬೇಕು. ಓದುವ ಕೋಣೆಗೆ ತಿಳಿ ಕೇಸರಿ ಬಣ್ಣ ಬಳಿಯುವುದರಿಂದ ಶುಭದಾಯಕವೂ ಮನಸ್ಸಿನ ವೃದ್ಧಿಗೆ ಉತ್ತೇಜನವೂ ದೊರಕುತ್ತದೆ.
ವಿದ್ಯಾರ್ಥಿಗಳು ಅಧ್ಯಯನ ಮುಗಿಸಿದ ನಂತರ ಮಲಗುವಾಗ ದಕ್ಷಿಣ ದಿಸೆಯತ್ತ ತಲೆಯಿರಿಸಿ ಮಲಗಿದರೆ ಭೂಮಿಯ ಕಾಂತೀಯ ಕ್ಷೇತ್ರ ಮತ್ತು ಶರೀರದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ ಮತ್ತು ತಾವು ಅಭ್ಯಸಿಸಿದಂತಹ ವಿಷಯವು ನೆನಪಿನಲ್ಲಿ ಉಳಿಯುತ್ತದೆ. ಅಂತಿಮವಾಗಿ ಓದುವ ಕೋಣೆಯಲ್ಲಿ ಗಡಿಯಾರ ಇರಲೇ ಬೇಕು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ವಾಸ್ತು - ಮನೆಯಲ್ಲಿ ಓದುವ ಕೋಣೆಗೆ ಪೂಜಾ ಕೋಣೆಯಂತೆ ಹೆಚ್ಚು ಪ್ರಾಶಸ್ತ್ಯವಿರುತ್ತದೆ. ಕಾರಣ ಅಲ್ಲಿ ಸರಸ್ವತಿ ನೆಲೆಯೂರಿದರೆ ಮಾತ್ರ ವಿದ್ಯೆಯು ಪ್ರಧಾನವಾಗುವುದು ಎಂಬ ನಂಬಿಕೆ ಭಾರತೀಯರಲ್ಲಿ ಗಾಡವಾಗಿದೆ. |
| |
|
|
|
|
 | | NRB |
| | |
| |
|
|
|
|
|
| ವಾಣಿಜ್ಯ ಲೇಖನಗಳು - ಯಾವುದೇ ಒಂದು ದೇಶದಲ್ಲಿ ವಕೀಲರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅಲ್ಲಿ ವಾದ-ವಿವಾದಗಳ ಸಂಖ್ಯೆ ಹೆಚ್ಚುತ್ತಲಿದೆ ಎಂದರ್ಥ. ಯಾವುದೇ ಒಂದು ದೇಶದಲ್ಲಿ ಪೊಲೀಸ್ ಸಂಖ್ಯೆ |
| |
|
|
|
|
|
|
|