|
| ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ |
ಇತ್ತೀಚೆಗಿನ ಟ್ವೆಂಟಿ20 ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ವಿಶ್ವ ಕಪ್ ತಂದ ಮಹೇಂದ್ರ ಸಿಂಗ್ ಧೋನಿಯವರ ಜನನ 7-7-1981ರಲ್ಲಿ ಚಂದ್ರ ಲಘ್ನ ಕನ್ಯಾದಲ್ಲಿ ಜಾರ್ಖಂಡಿನ ರಾಂಚಿಯಲ್ಲಿ ಆಗಿತ್ತು.
ಬಾಂಗ್ಲಾದೇಶದ ವಿರುದ್ಧ 2004 ರಲ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ಪಾದಾರ್ಪಣೆ ಮಾಡಿದ ಧೋನಿ ಕೇವಲ 3 ವರ್ಷಗಳಲ್ಲೇ ವಿಶ್ವಕಪ್ ತರುವ ಮೂಲಕ ಭಾರತದ ಗೌರವವನ್ನು ಮರಳಿ ಸ್ಥಾಪಿಸಿದರು. ಧೋನಿಯ ಚಂದ್ರ ಕುಂಡಲಿ ಗಜಕೇಸರಿ ಯೋಗವನ್ನು ಪಡೆದಿದೆ. ಇದರಿಂದ ಅವರಿಗೆ ರಾಜ ಸುಖವಂತೂ ಸಿಗುವುದು ಅದರ ಜತೆಗೆ ಶನಿ-ಚಂದ್ರರ ಮಿಲನವೂ ಒಳಿತು ತರುವುದು. ಶನಿ ಪಂಚಮೇಶದಿಂದ ಬಂದು ಐಶ್ವರ್ಯದ ಸಮೀಪವಿದೆ. ಇದರಿಂದ ಕ್ರೀಡೆಯನ್ನು ತಮ್ಮ ವೃತ್ತಿಜೀವನವಾಗಿಸಿ ದನಲಾಭ ಪಡೆಯುತ್ತಾರೆ.
ಚಂದ್ರ ಲಘ್ನದಲ್ಲಿ ಏಕದಶೆ ಇದೆ. ಲಗ್ನೇಶ ಬುಧ ಪಂಚಮಹಾಪುರಷ ಯೋಗದಿಂದ ಒಂದು ಭದ್ರ ಯೋಗ ಆಗಿ ದಶಮ ಭಾವದಲ್ಲಿ ದ್ವಾದಶಿ ಸೂರ್ಯನ ಸಮೀಪ ಬುಧಾದಿತ್ಯ ಆಗಿ ರಾಜ್ಯ ಭಾವ, ಕರ್ಮ ಭಾವದಲ್ಲಿ ಕುಳಿತಿದ್ದಾನೆ. ಇದು ಧೋನಿಯವರಿಗೆ ಭದ್ರಯೋಗ, ಉತ್ತಮ ಬುದ್ಧಿವಂತಿಕೆ ನೀಡಿತು. ಅದೇ ಗುರು ಲಘ್ನದಲ್ಲಿ ವಿರಾಜಿಸಿದ್ದಾನೆ. ಇದರಿಂದ ಶೀಘ್ರ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯದೊಂದಿಗೆ ಚಂದ್ರನು ಭಾಗ್ಯೇಶ ಶುಕ್ರ ಅಥವಾ ರಾಹುವಿನ ಪ್ರಭಾವದೊಂದಿಗೆ ನಾಯಕತ್ವ ಸಾಮರ್ಥ್ಯವನ್ನು ವೃದ್ಧಿಸುತ್ತಾನೆ.
ಚತುರ್ಥ ಭಾವ ಭೂಮಿ ಭಾವದೊಂದಿಗೆ ಸಂಬಂಧ ಹೊಂದಿರುತ್ತದೆ. ಅದೇ ಪ್ರಸಿದ್ಧಿಗೆ ಕಾರಣವಾಗುತ್ತದೆ. ಅದು ಲಗ್ನದಲ್ಲಿ ಕ್ರೀಡೆಗೆ ಸಂಬಂಧಿಸಿದ ಪಂಚಮ ಭಾವದ ಸ್ವಾಮಿ ಲಗ್ನದಲ್ಲಿ ಮಿತ್ರ ಬುಧದ ರಾಶಿಯ ಸಮೀಪ ಇರುತ್ತದೆ. ಮಂಗಳ ತೃತಿಯೇಶ ಪರಾಕ್ರಮ, ಪಾಲುದಾರಿಕೆ, ಮಿತ್ರ ಭಾವದ ಸ್ವಾಮಿ ಅಥವಾ ಅಷ್ಠಮೇಶ ಮಂಗಳ ನವ ಭಾವದಲ್ಲಿ ಶುಕ್ರನ ವೃಷಭ ರಾಶಿಯಲ್ಲಿದೆ.
ಚತುರ್ತ ಭಾವದ ಮೇಲೆ ಮಂಗಳನ ಮಿತ್ರ ದೃಷ್ಠಿ ಬೀಳುವುದರಿಂದ ಧೋನಿ ಕ್ರೀಡೆಯಲ್ಲಿ ಪ್ರಖ್ಯಾತರಾದರು. ಮಂಗಳನ ಮೇಲೆ ಗುರುವಿನ ಪೂರ್ಣ ದೃಷ್ಟಿ ಬೀಳುವುದರಿಂದ ಧೋನಿಯಲ್ಲಿ ಉತ್ಸಾಹದ ಕೊರತೆ ಇರಲಿಲ್ಲ. ಧೋನಿಯವರಿಗೆ ಈಗ ಏಳುವರೆ ಶನಿ ನಡೆಯುತ್ತಿದೆ. ಆದರೆ ಶುಭ ರಾಶಿ ಇರುವುದರಿಂದ ಧೋನಿ ಮೇಲೆ ಅದರ ಯಾವುದೇ ಪ್ರಭಾವ ಇರುವುದಿಲ್ಲ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಸಾಪ್ತಾಹಿಕ - ಎಲ್ಲ ಕಡೆಗಳಿಂದಲೂ ನಿಮಗೆ ಅನುಕೂಲವಾಗಲಿದೆ. ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. |
| |
|
|
|
|
 | | AP |
| | |
| |
|
|
|
|
|
| ಪ್ರೇಮಗಾಥೆ - ಮರೀನಾ ಬೀಚ್‌ನ ಸಂಜೆಗೆಂಪಿನ ಕಡಲ ಕಿನಾರೆಯಲ್ಲಿ ಕಲರವ ಕೇಳಿಬರುತ್ತಿತ್ತು. ಬಿಸಿಲ ಧಗೆಗೆ ಬಳಲಿದ ನೂರಾರು ಹುಡುಗರು ಉಪ್ಪು ನೀರಿನಲ್ಲಿ ಈಜು ಬಿದ್ದಿದ್ದರು. ಉಕ್ಕಿ ಬರುವ ನೊರೆ ನೊರೆ ಅಲೆಯಲ್ಲಿ ಕಾಲು ಕುಣಿಸುತ್ತಾ |
| |
|
|
|
|
|
|
|