|
| ದ್ರಾವಿಡ್‌ಗೆ ಇದು ಉತ್ತಮ ವರ್ಷ | |
ಇಪ್ಪತ್ತನಾಲ್ಕುವರ್ಷಗಳ ಹಿಂದೆ 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದ ಆ ಐತಿಹಾಸಿಕ ಘಟನೆ ಮತ್ತೆ ಮರುಕಳಿಸುವಂತೆ ಮಾಡುವ ಕನಸು ಹೊತ್ತು ಆತ್ಮವಿಶ್ವಾಸದಿಂದ ವೆಸ್ಟ್ ಇಂಡೀಸ್‌ಗೆ ತೆರಳಿರುವ ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ಅವರಿಗೆ ಒಳ್ಳೆಯ ದಿನಗಳು ಮುಂದಿವೆ ಎಂಬುದಾಗಿ ಸಂಖ್ಯಾಶಾಸ್ತ್ರ ಹೇಳುತ್ತಿದೆ.
1973ರ ಜನವರಿ 11ರಂದು ಜನಿಸಿರುವ ದ್ರಾವಿಡ್ ಅವರ ಜನ್ಮದಿನಾಂಕಾಧಾರಿತ ಸಂಖ್ಯೆ 2. ಈ ಸಂಖ್ಯೆಯವರು ಸಾಮಾನ್ಯವಾಗಿ ತುಂಬ ಸೂಕ್ಷ್ಮ ಸ್ವಭಾವದವರಾಗಿದ್ದು, ಮಹತ್ವಾಕಾಂಕ್ಷಿಗಳೂ ಹಾಗೂ ವ್ಯವಹಾರ ಚತುರರೂ ಆಗಿರುತ್ತಾರೆ.
ಈ ವರ್ಷಕ್ಕನುಗುಣವಾಗಿ ಅವರ ಸಂಖ್ಯೆ 3. ಇದರ ಪ್ರಕಾರ ಅವರು ತನ್ನ ಕೆಲಸದಲ್ಲಿ ಇನ್ನಷ್ಟು ಧನಾತ್ಮಕ ಹಾಗೂ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ.
ವೃತ್ತಿಪರವಾಗಿ ಹೇಳುವುದಾದರೆ, ಅವರ ನಿರ್ಭಿಡೆಯ ಉಪಕ್ರಮಗಳು ಉತ್ತಮ ಫಲಿತಾಂಶಗಳನ್ನು ತಂದಿಡಲಿವೆ. ಹೊಸಹೊಸ ಅವಕಾಶಗಳು ಅವರಿಗೆ ತನ್ನನ್ನು ಹೆಚ್ಚೆಚ್ಚು ಸಂಸ್ಕರಿತವಾಗಿ ಮತ್ತು ಪರಿಣಾಮಕಾರಿಯಾಗಿ ಬಿಂಬಿಸಿಕೊಳ್ಳಲು ಅನುವು ನೀಡುತ್ತವೆ.
ತನ್ನ ಹೊರೆಯನ್ನು ಇಳಿಸಿಕೊಳ್ಳಲು ಜವಾಬ್ದಾರಿಗಳನ್ನು ಅವರು ಕೈಕೆಳಗಿನವರಿಗೆ ಸುಲಭವಾಗಿ ದಾಟಿಸಿಬಿಡುತ್ತಾರೆ. ಆದರೆ ಇದ್ದಕ್ಕಿದ್ದಂತೆ ಉಂಟಾಗುವ ಬದಲಾವಣೆಗಳು ಅವರಿಗೆ ಪರೀಕ್ಷಾತ್ಮಕ ಸನ್ನಿವೇಶಗಳನ್ನು ಒಡ್ಡಲಿವೆ.
ಅವರ ಆರೋಗ್ಯಸ್ಥಿತಿ ಉತ್ತಮವಾಗಿದ್ದರೂ, ಸಣ್ಣಪುಟ್ಟ ತೊಂದರೆಗಳ ಕುರಿತು ಅವರು ಎಚ್ಚರ ವಹಿಸಬೇಕಾಗುತ್ತದೆ. ಒಟ್ಟಾರೆಯಾಗಿ ಈ ವರ್ಷ ದ್ರಾವಿಡ್ ಅವರಿಗೆ ಉತ್ತಮವಾಗಿದೆ. ವರ್ಷದ ಮುಂದಿನ ಭಾಗದಲ್ಲಿ ಅವರಿಗೆ ಅನುಕೂಲಕರ ಬದಲಾವಣೆಗಳು ತೋರಿಬರಲಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|